ಬೆಂಗಳೂರು : ಆದಾಯಕ್ಕೂ ಮೀರಿ ಆಸ್ತಿ ಹಿನ್ನಲೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ, ಕಚೇರಿಗಳ ಮೇಲೆ ಇಂದು ACB ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇನ್ನು ಈ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಇಂದು ಪ್ರತಿಭಟನೆ ನಡೆಸಿದೆ. ಇದು ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಕಡಿಮೆ ಮಾಡಲು ಬಿಜೆಪಿ ಸರ್ಕಾರ ಮಾಡ್ತಿರುವ ಹುನ್ನಾರ ಎಂದು ಟೀಕಿಸಿದೆ.
ಈ ಎಲ್ಲಾ ವಿದ್ಯಮಾನಗಳ ಬಗ್ಗೆ BDA ಅಧ್ಯಕ್ಷ ವಿಶ್ವನಾಥ್ ಮಾತನಾಡಿ ಜಮೀರ್ ಅಹ್ಮದ್ ಏನ್ ಸತ್ಯಹರಿಶ್ಚಂದ್ರನ ವಂಶದವರಾ? ನಮ್ಮ ಮೇಲೂ ದಾಳಿ ನಡೆದಿವೆ. ಸಂಶಯ ದೂರು ಯಾರ ಮೇಲೆ ಬಂದರೂ ದಾಳಿ ನಡೆಯುತ್ತೆ. ಜಮೀರ್ ಚಿನ್ನ ಆದರೆ ದಾಳಿ ಎಂಬ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬರ್ತಾರೆ. ತಪ್ಪು ಸಾಭೀತಾದರೆ ಕಬ್ಬಿಣದ ರೀತಿ ಕಪ್ಪಾಗಿ ಕಳಂಕಿತರಾಗ್ತಾರೆ ಎಂದರು.
ಯಲಹಂಕದಲ್ಲಿ ಸರ್ಕಾರದ ವಿವಿಧ ಯೋಜನೆಗಳ 10ಕೋಟಿ ವೆಚ್ಚದ ಕಾಮಗಾರಿಗಳು, NES ಸರ್ಕಲ್ ನಲ್ಲಿ ಬೃಹತ್ LED ಲೈಟ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಸಿ ಅವರು ಮಾತನಾಡಿದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..
PublicNext
05/07/2022 04:47 pm