ಬೆಂಗಳೂರು: ಇದು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ನಡೆಯುತ್ತಿರುವ ಅಕ್ರಮದ ಮತ್ತೊಂದು ಝಲಕ್.ಇಲ್ಲಿ ಕೆಲಸ ಮಾಡ್ತಿರುವ ಅಧಿಕಾರಿಯೋರ್ವರಿಗೆ ಹಣ-ದಿನಸಿ ಕೊಟ್ಟರೆ ಸಾಕು. ಸಿಬ್ಬಂದಿಗೆ ಆನ್ ಸ್ಪಾಟ್ ಲೀವ್ ಸ್ಯಾಂಕ್ಷನ್ ಆಗುತ್ತೆ. ಅಲ್ಲದೇ ಕಚೇರಿಯ ಕೆಲಸಗಳು ಫಿನಿಷ್ ಆಗ್ತವೆ.ಅಂದ್ಹಾಗೆ ನೋಡೋವರೆಗೂ ನೋಡಿ. ತಡೆದುಕೊಳ್ಳೋವರೆಗು ಟಾರ್ಚರ್ ತಡೆದುಕೊಂಡಿದ್ದ ಸಿಬ್ಬಂದಿ ಆಕೆಯ ಡಿಮ್ಯಾಂಡ್ ಫುಲ್ ಫಿಲ್ ಮಾಡಲಿಕ್ಕಾಗದೆ “ಬೇಡಿಕೆ”ಯ ಆಡಿಯೋದ ಝಲಕ್ ವೊಂದನ್ನು ರಿಲೀಸ್ ಮಾಡಿದ್ದಾರೆ.
ಗಂಗಾವತಿ ಡಿಪೋದಲ್ಲಿ ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್‌ಪೆಕ್ಟರ್ ಆಗಿರುವ ಹೇಮಾವತಿ ಮುಂದೆ ಡಿಪೋದ ಸಿಬ್ಬಂದಿ ರಜೆಯ ಮನವಿ ಮಾಡಿಕೊಂಡಿರಬೇಕು.ಮೊದಲೇ ಹಣ-ವಸ್ತು ಕಂಡ್ರೆ ಬಾಯಿಬಿಡೋ ಸ್ವಭಾವದ ಈಕೆ, ಎಂದಿನಂತೆ ಸಿಬ್ಬಂದಿಗೆ ನಿನ್ನ ರಜೆ ಮಂಜೂರು ಮಾಡುತ್ತೇನೆ.ಯಾರಿಗೂ ಹೇಳ್ಬೇಡ.ಆದ್ರೆ ನನ್ನದೊಂದು ಬೇಡಿಕೆ ಇದೆ.ಪಗಾರ್ ಆದ್ಮೆಲೆ ಕೊಡುಸ್ತಿಯೋ,ಇವತ್ತೇ ಕೊಡುಸ್ತಿಯೋ ಗೊತ್ತಿಲ್ಲ. 5 ಲೀಟರ್ ಅಡುಗೆ ಎಣ್ಣೆ ಕೊಡ್ಸು ಎಂದು ಡಿಮ್ಯಾಂಡ್ ಇಟ್ಟಿರುವ ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದೀಗ ರಜೆ ಕೊಡ್ಲಿಕ್ಕೆ ಲಂಚದ ರೂಪದಲ್ಲಿ 5 ಲೀಟರ್ ಎಣ್ಣೆಗೆ ಡಿಮ್ಯಾಂಡ್ ಮಾಡಿ ವಿವಾದಕ್ಕೆ ಸಿಲುಕಿದಷ್ಟೇ ಅಲ್ಲ, ಸಾರಿಗೆ ಕಾರ್ಮಿಕರ ಆಕ್ರೋಶಕ್ಕೂ ಕಾರಣವಾಗಿದೆ.ಇಂಥಾ ಅಧಿಕಾರಿ ವಿರುದ್ಧ ಕಠಿಣಾತೀ ಕಠಿಣ ಕ್ರಮ ಕೈಗೊಳ್ಳಬೇಕೆನ್ನುವುದು ಸಾರಿಗೆ ಕಾರ್ಮಿಕ ಸಮುದಾಯದ ಮನವಿ.
PublicNext
03/07/2022 03:34 pm