ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಮಾಜಿ 'ಮಹಾ' ಸಿಎಂ ಶರದ್ ಪವಾರ್ ಬೆಂಗಳೂರು ಭೇಟಿ; ಎನ್ ಸಿಪಿ ಕಚೇರಿ ಉದ್ಘಾಟನೆ

ದೇವನಹಳ್ಳಿ: ಬೆಂಗಳೂರಿನಲ್ಲಿ ನೂತನ NCP ಕಚೇರಿ ಉದ್ಘಾಟನೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಸೋಮವಾರ ಬೆಂಗಳೂರಿಗೆ ಆಗಮಿಸಿದರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಗಮಿಸಿದ ಶರದ್ ಪವಾರ್ ಅವರಿಗೆ ದೇವನಹಳ್ಳಿಯ ಸಾದಳ್ಳಿ ಗೇಟ್ ಬಳಿ ಭವ್ಯ ಸ್ವಾಗತ ಕೋರಲಾಯಿತು. ಪಕ್ಷದ ಕಾರ್ಯಕರ್ತರು ಆ್ಯಪಲ್ ಹಣ್ಣುಗಳಿಂದ ತಯಾರಿಸಿದ ಬೃಹತ್ ಹಾರ‌ ಹಾಕುವ ಮೂಲಕ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಅದ್ಧೂರಿ ಸ್ವಾಗತ ಕೋರಿದರು.

ದೇವನಹಳ್ಳಿ ಟೋಲ್ ಗೇಟ್ ನಿಂದ ಆರಂಭವಾದ ರ್‍ಯಾಲಿ ವೀರಗಾಸೆ, ಕುಣಿತದಿಂದ ಪ್ರಾರಂಭವಾಗಿ ಕಲಾತಂಡಗಳೊಂದಿಗೆ ಬಾಣಸವಾಡಿಯ ಪಕ್ಷದ ಕಚೇರಿವರೆಗೂ ಸಾಗಿತು.

ಬಳಿಕ ದೀಪ ಬೆಳಗುವ ಮೂಲಕ ಶರದ್ ಪವಾರ್ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿದರು. ಈ ವೇಳೆ ಎನ್ ಸಿಪಿ ರಾಜ್ಯಾಧ್ಯಕ್ಷ ಆರ್. ಹರಿ ಅವರು ಶರದ್ ಪವಾರ್ ಅವರಿಗೆ ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿದರು.

Edited By :
Kshetra Samachara

Kshetra Samachara

19/04/2022 12:39 pm

Cinque Terre

6.86 K

Cinque Terre

0

ಸಂಬಂಧಿತ ಸುದ್ದಿ