ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಿಷತ್ ಫೈಟ್ :ಬೆಂಗಳೂರು ಶಾಸಕರಿಗಿಲ್ಲ ‌ಮತದಾನದ ಹಕ್ಕು

ಬೆಂಗಳೂರು: ಅಬ್ಬರದ ಪ್ರಚಾರ, ಹಣದ ಆಮಿಷ, ಭ್ರಷ್ಟಾಚಾರ ಅರೋಪ - ಪ್ರತ್ಯಾರೋಪದಲ್ಲಿ ಮುಳುಗಿರುವ ಕೆಲ ಸಚಿವ, ಶಾಸಕರಿಗೆ ಈ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ.

ಹೌದು.. ಬೆಂಗಳೂರನ್ನು ಪ್ರತಿನಿಧಿಸುವ 9 ಸಚಿವರು, ಐವರು ಸಂಸದರು ಮತ್ತು 20ಕ್ಕೂ ಅಧಿಕ ಶಾಸಕರು, ಹಲವು ಎಂಎಲ್ಸಿಗಳ ಹೆಸರು ಈ ಬಾರಿಯ ಮೇಲ್ಮನೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಇಲ್ಲ.

ಹೀಗಾಗಿ ರಾಜ್ಯಾದ್ಯಂತದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳನ್ನು ತಮ್ಮ ಪಕ್ಷಕ್ಕೆ ಮತ ಕೊಡಿ ಎಂದು ಮನವಿ ಮಾಡುವ ಇವರೇ ಈಗ ಮತವಿಲ್ಲದೆ ಅತಂತ್ರರಾಗಿದ್ದಾರೆ.

ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಚುನಾಯಿತ ಆಡಳಿತ ಅಸ್ತಿತ್ವದಲ್ಲಿಲ್ಲದೆ ಇರುವುದರಿಂದ ಸಂಸದರು, ಶಾಸಕರು ಮತದಾನದಿಂದ ವಂಚಿತರಾಗಿದ್ದಾರೆ.

ಮತಯಾಚನೆ ಮಾಡುತ್ತ ಸುತ್ತಾಡುತ್ತಿರುವ, ತಮ್ಮ ಪಕ್ಷದ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವ ಸಚಿವರಾದ ಆರ್‌. ಅಶೋಕ್‌, ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜ್‌, ವಿ. ಸೋಮಣ್ಣ, ವಿ.ಮುನಿರತ್ನ, ಗೋಪಾಲಯ್ಯ ಅವರಿಗೇ ಈ ಬಾರಿ ಮತ ಹಕ್ಕಿಲ್ಲ.

Edited By : Nagaraj Tulugeri
Kshetra Samachara

Kshetra Samachara

06/12/2021 06:17 pm

Cinque Terre

222

Cinque Terre

0

ಸಂಬಂಧಿತ ಸುದ್ದಿ