ಬೆಂಗಳೂರು: ಖಾದ್ಯ ತೈಲ ದರ ಏರಿಕೆಯ ಹೊಡೆತ ಬೆನ್ನಲ್ಲೇ ಏಪ್ರಿಲ್ 1 ರಿಂದ ಹೊಟೇಲ್ ಗಳಲ್ಲಿ ಊಟ, ತಿಂಡಿಯ ದರದಲ್ಲೂ ಶೇ.10% ರಷ್ಟು ಏರಿಕೆಯಾಗುವ ಸಂಭವ ಇದೆ.
ಖಾದ್ಯ ತೈಲದ ಜತೆಗೆ ಅಡುಗೆ ಇಂಧನ , ದಿನ ಬಳಕೆ ವಸ್ತುಗಳ ದರ ಏರಿಕೆಯಾದ ಹಿನ್ನೆಲೆಯಲ್ಲಿ ಹೊಟೇಲ್ ಗಳಲ್ಲಿ ಊಟ ,ತಿಂಡಿ ತಯಾರಿ ಮೇಲೆ ಹೊರೆ ಬಿದ್ದಿದೆ.
150-160 ರೂ. ಮಿತಿಯಲ್ಲಿದ್ದ ಸನ್ ಪ್ಲವರ್ ರಿಪೈನ್ ನ್ಡ್ ಆಯಿಲ್ ದರ 200 ರೂ. ಗಳ ಸಮೀಪದಲ್ಲಿದೆ.
ಹೀಗಾಗಿ ಪೂರಿ, ಚಪಾತಿ, ಪಲ್ಯ ವಡೆ ಬೋಂಡ ಬಜ್ಜಿ ಕಬಾಬ್ ಚೈನೀಸ್ ಪುಡ್ ಸೇರಿದಂತೆ ಹಲವು ವೆಜ್ - ನಾನ್ ವೆಜ್ ಪದಾರ್ಥಗಳನ್ನು ತಯಾರಿಸಲು ಖರ್ಚು ಹೆಚ್ಚಾಗುತ್ತಿದೆ.
ಹೀಗಾಗಿ ಏಪ್ರಿಲ್ 1 ರಿಂದ ಊಟ ತಿಂಡಿಯ ದರ ಏರಿಕೆ ಮಾಡುವ ಸಂಬಂಧ ಹೊಟೇಲ್ ಮಾಲೀಕರ ಸಂಘವು ಸಭೆ ನಡೆಸಿ ತೀರ್ಮಾನ ಕೈಗೊಂಡಿದೆ.
PublicNext
17/03/2022 08:58 pm