ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಸಾಪದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರ ಹಾಗೂ ಜ್ಞಾನಜ್ಯೋತಿ ಸಂಸ್ಥೆ ವತಿಯಿಂದ ರಾಜಹರ್ಷ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು ಆದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಶಿವಣ್ಣ ಅವರು, 'ನನ್ನ ಗಿಡ ನನ್ನ ಮರ ಎನ್ನುವ ಹೆಮ್ಮೆ ಮನುಷ್ಯನ ಎದೆಯಲ್ಲಿ ಮೂಡಿದಾಗ ಪರಿಸರಕ್ಕೆ ಹಾನಿ ಉಂಟಾಗುವುದಿಲ್ಲ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಬೇಕಾದರೆ ನಾಲ್ವಡಿ ಕೃಷ್ಣರಾಜ ಒಡೆಯರಂತೆ ದೂರದೃಷ್ಟಿಯನ್ನು ಬೆಳೆಸಿಕೊಂಡು ಎಲ್ಲ ಸಮುದಾಯಗಳನ್ನು ಒಟ್ಟು ಗೂಡಿಸಿಕೊಂಡು ಮುನ್ನಡೆಯಬೇಕು. ಅಂದಾಗ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಪಂಚಭೂತಗಳಿಗೆ ಯಾವುದೇ ಜಾತಿ ಭೇದ ಧರ್ಮ ವರ್ಗ ಇರುವುದಿಲ್ಲ ಮನುಷ್ಯನು ತನಗೆ ಬೇಕಾದ ರೀತಿಯಲ್ಲಿ ಮೇಲು ಕೀಳುಗಳನ್ನು ಸೃಷ್ಟಿಸಿಕೊಂಡು ನಲುಗಿ ಹೋಗಿದ್ದಾನೆ' ಎಂದು ಹೇಳಿದರು

ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಲಿತ ಮಹಾದೇವಯ್ಯ ಮಾತನಾಡಿ, ಪರಿಸರದ ಬಗ್ಗೆ ಹೆಣ್ಣಿನಲ್ಲಿ ಕಾಳಜಿ ಉಂಟಾದರೆ ಪರಿಸರ ಉಳಿಯುತ್ತದೆ ಇಲ್ಲವಾದರೆ ನಶಿಸಿಹೋಗುತ್ತದೆ ಜೋಪಾನವಾಗಿ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು

ಜ್ಞಾನಜ್ಯೋತಿ ಸಂಸ್ಥೆಯ ಫಾದರ್ ಮೆಲ್ವಿನ್ ಕೆವಿನ್ ಸಿಕ್ವೇರಾ ಅವರು ಮಾತನಾಡಿ ತಾಯಿಗೆ ಕೊಡುವ ಸ್ಥಾನವನ್ನು ಭೂಮಿಗೆ ಕೊಟ್ಟು ಎಲ್ಲ ಜೀವರಾಶಿಗಳನ್ನು ಕಾಪಾಡಿಕೊಂಡು ಹೋದಾಗ ಮಣ್ಣಿನ ಸಮತೋಲನೆಯನ್ನು ಕಾಪಾಡಬಹುದು ಇಲ್ಲವಾದರೆ ಋತುಗಳು ಬದಲಾಗಿ ಮನುಷ್ಯನಿಗೆ ಆಪತ್ತು ಉಂಟಾಗುತ್ತದೆ ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

19/06/2022 05:40 pm

Cinque Terre

1.3 K

Cinque Terre

0

ಸಂಬಂಧಿತ ಸುದ್ದಿ