ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಧಾನ ಸಭಾ ಕ್ಷೇತ್ರವಾರು ವಾರ್ಡ್ ಹಂಚಿಕೆ !

ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕೇಂದ್ರ ವಿಭಾಗದ ವಿಧಾನ ಸಭಾ ಕ್ಷೇತ್ರ ಗಳಲ್ಲಿ ಕೆಲವು ವಾರ್ಡ್ ಗಳನ್ನು ಕೈಬಿಟ್ಟಿರೆ, ಹೊರವಲಯದ ಕ್ಷೇತ್ರಗಳಲ್ಲಿ 3-5 ವಾರ್ಡ್ ಗಳು ಹೆಚ್ಚಿ ಸಲಾಗಿದೆ.

ಬಿಬಿಎಂಪಿ ವಾರ್ಡ್ ಮರು ವಿಂಗಡಣೆಗೆ ಸುಪ್ರೀಂ ಕೋರ್ಟ್ 8 ವಾರಗಳ ಗಡುವು ನೀಡಿದೆ. ಮುಖ್ಯ ಆಯುಕ್ತರ ನೇತೃತ್ವದಲ್ಲಿ ರಚಿಸಲಾದ ಸಮಿತಿ ಅಂತಿಮ ವರದಿ ಸಿದ್ದ ಪಡಿಸಿದೆ. ಈಗಾಗಲೇ ಜಾರಿಯಲ್ಲಿದ್ದ 198 ವಾರ್ಡ್‌ಗಳ ವಿಸ್ತೀರ್ಣಗೆ ಕೇವಲ 2 ಹಳ್ಳಿಗಳು ಸೇರ್ಪಡೆ ಮಾಡಿಕೊಂಡು 243 ವಾರ್ಡ್ ರಚಿಸಬೇಕಿತ್ತು.

ಹೀಗಾಗಿ 2011ರ ಜನಗಣತಿ ಆಧಾರದ ಮೇಲೆ 84.43 ಲಕ್ಷ ಜನಸಂಖ್ಯೆಯನ್ನು ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗಿದೆ. ನಗರದ ಕೇಂದ್ರ ವಲಯದಲ್ಲಿ ವಾರ್ಡ್‌ಗಳ ಸಂಖ್ಯೆಯಲ್ಲಿ ಒಂದೆರಡು ಮಾತ್ರ ಹೆಚ್ಚಳ‌ ಮಾಡಲಾಗಿದೆ.

32 ರಿಂದ 35 ಸಾವಿರ ಜನಸಂಖ್ಯೆಗೆ ಒಂದರಂತೆ ವಾರ್ಡ್ ಇರಲಿದೆ. ನಗರದ ಕೇಂದ್ರ ಭಾಗದಲ್ಲಿ ಜನ ಸಂಖ್ಯೆ ಹೆಚ್ಚಳವಾಗಿಲ್ಲ. ಹೀಗಾಗಿ ಈ ಭಾಗದಲ್ಲಿ ಬದಲಾವಣೆ ಆಗುವುದಿಲ್ಲ. ಆದರೆ ಹೊರವಲಯದಲ್ಲೂ ಜನಸಂಖ್ಯೆ ಹೆಚ್ಚಳವಾಗಿರೋದ್ರಿಂದ ವಾರ್ಡ್ ಸಂಖ್ಯೆ ಏರಿಕೆ ಮಾಡಲಾಗಿದೆ.

ಇನ್ನೂ ವಾರ್ಡ್ ವಿಂಗಡಣೆ ವರದಿ ಸಿಎಂ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಅಂತಿಮವಾಗಿ ಒಪ್ಪಿಕೊಳ್ಳಬೇಕಾಗಿದೆ.

ಇನ್ನೂ ವಾರ್ಡ್ ಗಳಿಗೆ ವೀರ್ ಸಾರ್ವಕರ್ , ಹೆಡ್ಗೆವಾರ್ ಸೇರಿದಂತೆ ಸಂಘ ಪರಿವಾರದವರ ಹೆಸ್ರನ್ನು ಇಡಲಾಗಿದೆ ಎಂಬುದರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Edited By :
Kshetra Samachara

Kshetra Samachara

03/06/2022 03:56 pm

Cinque Terre

3.17 K

Cinque Terre

0

ಸಂಬಂಧಿತ ಸುದ್ದಿ