ಗ್ಯಾಸ್ ಸಿಲಿಂಡರ್ ಹಾಗು ಅಡುಗೆ ಮಾಡುವ ಎಣ್ಣೆಗೆ ಹೂವಿನಹಾರ ಹಾಕಿ ವಿನೂತನವಾಗಿ ಪ್ರತಿಭಟನೆ ನಡೆಸಿರುವ ಘಟನೆ ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮದಲ್ಲಿ ನಡೆದಿದೆ.
ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಅಡುಗೆ ಅನಿಲ ಗ್ಯಾಸ್ ಸಿಲಿಂಡರ್ ಗೆ ,ಬೈಕು ಹಾಗೂ ಟ್ಯಾಕ್ಟರ್ ಗಳಿಗೆ ಹೂವಿರ ಹಾರ ಹಾಕಿ ವಿನೂತನವಾಗಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಊಟದ ತಟ್ಟೆ ಹಾಗೂ ಸೌಟು ಬಡಿದು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ,
ಕಳೆದ ಮೂರುದಿನಗಳಿಂದ ಪೆಟ್ರೋಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಹೆಚ್ಚುತ್ತಲೇ ಇದೆ ಇದರಿಂದ ಸಾಮಾನ್ಯ ಜನರು ಹೇಗೆ ಜೀವನ ಮಾಡಬೇಕು!? ಜನಸಾಮಾನ್ಯರ ಕಷ್ಟಗಳನ್ನ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಮಹಿಳೆಯರು ಕೇಂದ್ರ ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದರು.
Kshetra Samachara
31/03/2022 05:15 pm