ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ಆಟದ ಮೈದಾನವಾಗಿಯೇ ಉಳಿಯಬೇಕು ಎಂದು ಆಗ್ರಹಿಸಿ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಂಘಟನೆಗಳು ಬಂದ್ ನಡೆಸುತ್ತಿದ್ದು, ಶಾಂತಿಯುತ ಪ್ರತಿಭಟನಾ ರ‍್ಯಾಲಿ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಬಂದ್ ಮತ್ತು ಪ್ರತಿಭಟನೆಗಳು ಆರಂಭಗೊಂಡಿದ್ದು, ಸಂಜೆ 5 ಗಂಟೆವರೆಗೆ ಇರಲಿದೆ.
ಇನ್ನೂ ಬಂದ್ ಗೆ ಬೆಂಬಲ ಸೂಚಿಸುವಂತೆ ಮುಸ್ಲಿಂರ ಅಂಗಡಿಗಳಿಗೂ ನಾಗರಿಕರ ಒಕ್ಕೂಟವು ಮನವಿ ಮಾಡಿದೆ. ಮುಸ್ಲಿಮರ ಚಿಕನ್, ಮಟನ್ ಸ್ಟಾಲ್, ಪ್ರಾವಿಷನ್ ಸ್ಟೋರ್ಗಳು ಬಂದ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ವೆಂಕಟೇಶ್ವರ ಜ್ಯೂಸ್ ಅಂಗಡಿಗೆ ಭೇಟಿಕೊಟ್ಟ ಒಕ್ಕೂಟವು, ಎಲ್ಲರೂ ಬಂದ್ ಮಾಡಿರುವಾಗ ನಿಂದೇನು ಸ್ಪೆಷಲ್, ಬಂದ್ಗೆ ಬೆಂಬಲ ಸೂಚಿಸಿ ಎಂದು ಒತ್ತಾಯ ಮಾಡಿದೆ. ಈ ವೇಳೆ ಜ್ಯೂಸ್ ಅಂಗಡಿ ಮಾಲೀಕ ಜ್ಯೂಸ್ ಆರ್ಡರ್ ಇತ್ತು ಹೀಗಾಗಿ ತೆರೆದಿದ್ದೇವೆ. ನಂತರ ಮುಚ್ಚುತ್ತೇವೆ ಎಂದು ಹೇಳಿ ಕೊನೆಯಲ್ಲಿ ಅಂಗಡಿ ಬಾಗಿಲು ಹಾಕಿ ಹೋಗಿದ್ದಾರೆ.ಈ ಕುರಿತು ನಮ್ಮ ಪ್ರತಿನಿಧಿ ಗಣೇಶ್ ಹೆಗಡೆ ನಡೆಸಿರುವ ವಾಕ್ ತ್ರೂ ಇಲ್ಲಿದೆ.
PublicNext
12/07/2022 05:23 pm