ಬೆಂಗಳೂರು ದಕ್ಷಿಣ:ಆನೇಕಲ್ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಯೋಗವನ್ನು ಪಠ್ಯವಾಗಿ ಬೋಧಿಸಲು ಸಿದ್ದತೆಯನ್ನು ಈಗಿಂದಲೇ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ, ಅಲ್ಲದೆ ಅದಕ್ಕೆ ಬೇಕಾದ ಪರಿಣಿತರ ಮಾರ್ಗದರ್ಶನವನ್ನು ಪಡೆಯಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಆನೇಕಲ್ ತಾಲೂಕಿನ ಜಿಗಣಿ ಭಾಗದ ಪ್ರಶಾಂತಿ ಕುಟೀರದಲ್ಲಿ ಏರ್ಪಡಿಸಲಾಗಿದ್ದ 24 ನೇ ಅಂತರರಾಷ್ಟ್ರೀಯ ಯೋಗ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಬಾಗವಹಿಸಿ ಮಾತನಾಡಿದರು.
ಯೋಗದಿಂದ ಸ್ಥಿತಪ್ರಜ್ಞೆ, ಸಮಯಪ್ರಜ್ಞೆ, ಸಾತ್ವಿಕತೆಯ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಹೀಗಾಗಿ ಮಕ್ಕಳಲ್ಲಿ ಏಕಾಗ್ರತೆಗಾಗಿ ಯೋಗ ಬೋಧಿಸಲು ರೀರ್ಮಾನಿಸಲಾಗಿದೆ ಎಂದರು.
ಪ್ರಶಾಂತಿ ಕುಟೀರದ ಎಸ್-ವ್ಯಾಸ ನಾಸವನ್ನು ನಿರ್ಮಿಸಲಿದೆ. ಯಾಕಂದರೆ ಸ್ಪಿರಿಚ್ಯುಯಾಲಿಟಿ ಮತ್ತು ವಿಜ್ಞಾನ ಒಂದೇ ನಾಣ್ಯದ ಎರೆಡು ಮುಖಗಳೆಂದು ಬಣ್ಣಿಸಿದರು.
ರೋಗಮುಕ್ತ ಸಮಾಜಕ್ಕಾಗಿ ಎಸ್-ವ್ಯಾಸ ವಿವಿಯ ನೂತನ ‘ಆಯು’ ಆಪ್ ಬಿಡಿಗಡೆಗೊಳಿಸಿದ ಬಸವರಾಜ ಬೊಮ್ಮಾಯಿ;
ಎಸ್-ವ್ಯಾಸ ಕೇಂದ್ರದ ಯೋಗದಿಂದ ಕರೋನಾ ತಡೆಗಟ್ಟಲು ಸಾಧ್ಯವಾಗಿದೆ ಎಂದು ‘ಆಯು’ ಆಪ್ ತಂತ್ರಜ್ಞ ತಿಳಿಸಿದರು.
ಆಋಓಗ್ಯವನ್ನು ಕಾಪಾಡಿಕೊಳ್ಳಲು ‘ಆಯು” ಆಪ್ ಬಳಕೆ ಅಗತ್ಯ ನಿಯಮ ರೀತಿಗಳನ್ನು ತಿಳಿಸಿಕೊಡುತ್ತದೆ ಇದರಿಂದ ಹೇಗೆ ಸಮರ್ಪಕವಾಗಿ ಯೋಗವನ್ನು ಬಳಸಬೇಕೆಂದು ತಿಳಿಸುತ್ತದೆ ಎಂದರು. ಈ ಆಪ್ ನ್ನು ಸಿಎಂ ಬಸವರಾಜು ಬೊಮ್ಮಾಯಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್, ಎಸ್ಪಿ ವಂಶೀಕೃಷ್ಣ ಬೆಂಗಳೂರು ದಕ್ಷಿಣ ಶಾಸಕ ಎಂ ಕೃಷ್ಣಪ್ಪ ಭಾಗವಹಿಸಿದ್ದರು.
PublicNext
29/05/2022 09:21 pm