ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ, ಪ್ರಕಾಶನಗರ ವಾರ್ಡ್‌ನಲ್ಲಿರುವ ನವೀಕರಣಗೊಂಡ ಸರಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆ ಮತ್ತು ಶಾಲೆಯ ಮಕ್ಕಳ ವಿದ್ಯಾಭ್ಯಾಸ ಅನುಕೂಲಕ್ಕೆ ಆಕರ್ಷಕ ವರ್ಣಚಿತ್ರ ಕಲಾಕೃತಿ ಉದ್ಘಾಟನೆಯನ್ನು ಮಾಜಿ ಶಿಕ್ಷಣ ಸಚಿವ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಶಾಲೆಯ ಮಕ್ಕಳೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಶಾಸಕ ಎಸ್.ಸುರೇಶ್ ಕುಮಾರ್ ಮಾತನಾಡಿ ದೇಶ ಅಭಿವೃದ್ದಿಯಾಗಬೇಕಾದರೆ ಶಿಕ್ಷಣ ಮುಖ್ಯ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಲು ಉತ್ತಮ ವಾತವರಣ ಕಲ್ಪಿಸಬೇಕು ಅದ್ದರಿಂದ ಶಾಲೆಯನ್ನು ನವೀಕರಣ ರೀತಿಯಲ್ಲಿ ಸೌಂದರ್ಯಿಕರಣಗೊಳಿಸಲಾಗಿದೆ. ಉತ್ತಮ ವಾತಾವರಣವಿದ್ದಾಗ ಮಕ್ಕಳು ಓದಲು, ಕಲಿಯಲು ಸುಗಮವಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಹೆಚ್ಚಾಗಿದೆ. ಮಧ್ಯಮ ಮತ್ತು ಕೆಳ ವರ್ಗದ ಕುಟುಂಬಗಳಿಗೆ ಸರ್ಕಾರಿ ಶಾಲೆಗಳು ವರದಾನವಾಗಿದೆ ಎಂದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರವೀಂದ್ರನ್, ಬಿ.ಜೆ.ಪಿ ಮಂಡಲದ ಅಧ್ಯಕ್ಷರಾದ ರಾಘವೇಂದ್ರರಾವ್, ಶಾಲೆಯ ಎಸ್‌ಡಿಎಂಸಿಯ ಲಕ್ಷ್ಮೀನಾರಾಯಣ್, ವಿ.ತ್ಯಾಗರಾಜ್, ಮುಖ್ಯ ಶಿಕ್ಷಕಿ ಜಯಮ್ಮ, ಶಿಕ್ಷಣಾಧಿಕಾರಿ ಉಮಾದೇವಿ, ಬಿ.ಜೆ.ಪಿ ಮುಖಂಡರಾದ ಟಿ.ಎನ್.ರಮೇಶ್ ಸುದರ್ಶನ್, ಪ್ರವೀಣ್ ಇದ್ದರು.
Kshetra Samachara
16/07/2022 09:27 am