ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಂಗಳೂರು ವಿವಿಯ ಉಪ ಕುಲಪತಿ ವಿರುದ್ಧ ವಿದ್ಯಾರ್ಥಿಗಳ ಧರಣಿ

ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೋ. ವೇಣು ಗೋಪಾಲ ಅಕ್ರಮವಾಗಿ 28 ಕೋಟಿ ಮೊತ್ತದ ಬಿಲ್ ಅನುಮೋದನೆ ನೀಡಿದ್ದಾರೆಂದು ವಿದ್ಯಾರ್ಥಿಗಳ ಸಂಘಟನೆ ಪ್ರತಿಭಟನೆ ನಡೆಸಿತು.

ಶುಕ್ರವಾರ ಬೆಳಗ್ಗೆ ವಿಶ್ವವಿದ್ಯಾಲಯ ಸಿಬ್ಬಂದಿ, ಶಿಕ್ಷಕರೇತರ ಸಂಘ, ಸಂ ಶೋಧನಾ ವಿದ್ಯಾರ್ಥಿಗಳ ಸಂಘಟನೆ ಉಪ ಕುಲಪತಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರು ಯುನಿವರ್ಸಿಟಿ ಫೈನಾನ್ಸ್ ವಿಭಾಗದ ಸಿಬ್ಬಂದಿ ಜಯಲಕ್ಷ್ಮಿ ಅವರನ್ನು ಹೊರಹಾಕಿ ಕಚೇರಿಯೊಳಗೆ ಧರಣಿ ನಡೆಸಿದ್ದಾರೆ. ಜೂನ್ 11 ವಿಸಿ ವೇಣುಗೋಪಾಲ ರವರ ಅವಧಿ ಮುಗಿಯಲಿದೆ. ಇದಕ್ಕಾಗಿ ತರಾತುರಿಯಲ್ಲಿ ಅಕ್ರಮವಾಗಿ 28 ಕೋಟಿ ಕಾಮಗಾರಿ ಬಿಲ್ ಪಾವತಿ ಮಾಡಿದ್ದಾರೆಂದು ಪ್ರತಿಭಟನಾ ನಿರತರು ಆರೋಪಿ ಸುತ್ತಿದ್ದಾರೆ.

Edited By :
Kshetra Samachara

Kshetra Samachara

27/05/2022 06:03 pm

Cinque Terre

4.18 K

Cinque Terre

0

ಸಂಬಂಧಿತ ಸುದ್ದಿ