ವಿಶೇಷ ವರದಿ-- ಪ್ರವೀಣ್ ನಾರಾಯಣ ರಾವ್...
ಬೆಂಗಳೂರು: ಇಡೀ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮ ಸಡಗರದಲ್ಲಿದೆ. ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನವು ಭಾರತೀಯರ ಸಂಭ್ರಮವನ್ನ ಇಮ್ಮಡಿ ಗೊಳಿಸಿದೆ.ದೇಶಭಕ್ತಿಯ ಅಭಿವ್ಯಕ್ತಿಗೆ ಒಂದು ಅದ್ಭುತ ವೇದಿಕೆಯನ್ನು ಒದಗಿಸಿದೆ. ಆದರೆ.....?
ಹರ್ ಘರ್ ತಿರಂಗಾವನ್ನ ಖಾದಿಯ ಜೊತೆ ಜೋಡಿಸಿದ್ದರೆ ಅದರಿಂದ ಸ್ವದೇಶಿ ಖಾದಿಯ ಖದರ್ ಇನ್ನಷ್ಟು ಹೆಚ್ಚುತ್ತಿತ್ತು..ನೂರಾರು ಕೋಟಿ ಆದಾಯ ಸರ್ಕಾರಕ್ಕೆ ಬರುತ್ತಿತ್ತು. ಲಕ್ಷಾಂತರ ಬಡಪಾಯಿ ನೇಕಾರರ ಬದುಕಿಗೆ ಆಧಾರವಾಗುತ್ತಿತ್ತು..
ಖಾದಿಗೂ ಭಾರತದ ಸಂಸ್ಕೃತಿಗೂ ಇತಿಹಾಸಕ್ಕೂ ಅವಿನಾಭಾವ ಸಂಬಂಧ..ಮಹಾತ್ಮ ಗಾಂಧಿಯವರಂತೂ ಖಾದಿಯನ್ನು ಸ್ವಾತಂತ್ರ್ಯ ಸಂಗ್ರಾಮದ ಪ್ರಬಲ ಅಸ್ತ್ರವನ್ನಾಗಿಸಿ ಬಳಸಿದರು..
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಖಾದಿಯೇ ದೇಶಭಕ್ತಿಯ ಕಿಚ್ಚು ಹಚ್ಚುವ ಅಸ್ತ್ರವಾಗಿತ್ತು.ಮೊದಲು ಚರಕವೇ ರಾಷ್ಟ್ರಧ್ವಜದಲ್ಲಿತ್ತು. ನಾವು ಭಾರತೀಯರು ಅಪ್ಪಟ ಸ್ವದೇಶೀ ಖಾದಿ ಬಾವುಟವನ್ನೇ ಹಾರಿಸಿ ದೇಶಭಕ್ತಿ ಮೆರೆಯಬೇಕು ಅನ್ನುವುದು ಪಬ್ಲಿಕ್ ನೆಕ್ಸ್ಟ್ ಆಶಯ....
PublicNext
14/08/2022 10:35 pm