ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದಲ್ಲಿ ತಾಲ್ಲೂಕು ಕನ್ನಡ ಕಲಾವಿದರ ಸಂಘದ ವತಿಯಿಂದ ಕುರುಕ್ಷೇತ್ರ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು.ಚಪ್ಪರಕಲ್ಲು ಗ್ರಾಮದ ಹಿರಿಯರಾದ ಹನುಮಂತನಗೌಡ & ಕೃಷ್ಣಮೂರ್ತಿ ಸ್ಮರಣಾರ್ಥ ನಾಟಕ ಕಾರ್ಯಕ್ರಮ ನೆರವೇರಿದೆ.
ಧಾರಾವಾಹಿ, ಸಿನಿಮಾಗಳ ಗಟ್ಟಿ ಪೈಪೋಟಿ ನಡುವೆಯೂ ಗ್ರಾಮೀಣ ಭಾಗದಲ್ಲಿ ಇನ್ನು ನಾಟಕಗಳಿಗೆ ಪ್ರೇಕ್ಷಕರಿದ್ದಾರೆ ಎಂಬುದಕ್ಕೆ ಚಪ್ಪರಕಲ್ಲು ನಾಟಕವೇ ಸಾಕ್ಷಿಯಾಗಿದೆ ಎಂದು ನಾರಾಯಣಸ್ವಾಮಿ ಅಭಿನಂದನೆ ಸಲ್ಲಿಸಿದರು.
SureshBabu. Public Next.ದೇವನಹಳ್ಳಿ..
Kshetra Samachara
26/04/2022 08:30 am