ಬೆಂಗಳೂರು: ಆನೇಕಲ್ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್‌ಗೆ ಆನೇಕಲ್ ಘಟಕ ಅಧ್ಯಕ್ಷ ಸ್ಥಾನಕ್ಕೆ ಅದೂರು ಪ್ರಕಾಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ್ ಮೂರ್ತಿ ತಿಳಿಸಿದ್ದಾರೆ.
ನೂತನವಾಗಿ ಆಯ್ಕೆಯಾದ ಆದೂರು ಪ್ರಕಾಶ್ ಮಾತನಾಡಿ, 'ಕನ್ನಡದ ಕೆಲಸಕ್ಕೆ ಮಾನ್ಯ ಜಿಲ್ಲಾ ಅಧ್ಯಕ್ಷರು ಪ್ರಕಾಶ್ ಮೂರ್ತಿ ಅವರು ನನ್ನನ್ನು ಆಯ್ಕೆ ಮಾಡಿರುವುದು ತುಂಬಾ ಖುಷಿಯ ವಿಚಾರ ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಕರ್ನಾಟಕದ ಗಡಿಭಾಗ ಆಗಿರತಕ್ಕಂತ ಈ ಭಾಗದಲ್ಲಿ ಹೆಚ್ಚೆಚ್ಚು ಕನ್ನಡ ಕಾರ್ಯಕ್ರಮ ಆಗಬೇಕು. ಜನತೆಗೆ ಮಹತ್ತರವಾದ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಅದನ್ನು ತಲೆಬಾಗಿ ಕೆಲಸ ಮಾಡಿಕೊಂಡು ಹೊಗುತ್ತೇನೆ ಎಂದು ತಿಳಿಸಿದರು.
ಇನ್ನು ಕನ್ನಡ ಸಾಹಿತ್ಯ ಪರಿಷತ್ 31 ಜನ ಸದಸ್ಯರಿದ್ದು, 16 ಜನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ಹಿರಿಯರು ಶೈಕ್ಷಣಿಕ ಸಂಘದ ಪದಾಧಿಕಾರಿಗಳು ಬೆಂಗಳೂರು ನಗರ ಜಿಲ್ಲಾ ಘಟಕದ ಪ್ರಕಾಶಮೂರ್ತಿ ಕಸಾಪ ಪದಾಧಿಕಾರಿಗಳು ಭಾಗಿಯಾಗಿದ್ದರು.
Kshetra Samachara
03/03/2022 10:29 am