ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಈದ್ಗಾ ಮೈದಾನ ಬಳಿ ಶ್ರೀ ಗಣೇಶ ಪ್ರತಿಷ್ಠಾಪನೆ ವಿಚಾರ; ಮತ್ತೆ ಗಲಾಟೆ

ಬೆಂಗಳೂರು: ವಿವಾದಿತ ಕೇಂದ್ರವಾಗಿರೋ ಚಾಮರಾಜಪೇಟೆ ಈದ್ಗಾ ಮೈದಾನದ ಬಳಿ ಶ್ರೀ ಗಣೇಶೋತ್ಸವ ಪ್ರಯುಕ್ತ ಗಣಪನ ಪ್ರತಿಷ್ಠಾಪನೆ ವಿಚಾರಕ್ಕೆ ಮತ್ತೆ ಗಲಾಟೆಯಾಗಿದೆ.

ಸ್ಥಳೀಯರು ಗಣೇಶ ಕೂರಿಸೋ ವಿಚಾರಕ್ಕೆ ಹಿಂದೂ ಕಾರ್ಯಕರ್ತರು ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನೆಪದಲ್ಲಿ ಗಲಾಟೆ ಮಾಡಿದ್ದ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.

ಈದ್ಗಾ ಮೈದಾನ ಬಳಿಯಲ್ಲಿ ಕಳೆದ ಮೂರು ವರ್ಷಗಳಿಂದ ಶ್ರೀ ಅಯ್ಯಪ್ಪ ದೇವಾಲಯದ ಬಳಿ ಗಣೇಶನ ಪ್ರತಿಷ್ಠಾಪನೆ ಮಾಡ್ತಾ ಇದ್ರು. ಈ ಬಾರಿ ಶ್ರೀ ಮಹದೇಶ್ವರ ದೇವಾಲಯದ ಮುಂಭಾಗ ಪ್ರತಿಷ್ಠಾಪನೆಗೆ ಮನವಿ ಮಾಡಲಾಗಿತ್ತು. ಈದ್ಗಾ ಮೈದಾನಕ್ಕೆ ಹೊಂದಿಕೊಂಡಿರೋ ಅರಳಿ ಮರದ ಬಳಿ ಪ್ರತಿಷ್ಠಾಪನೆಗೆ ಮನವಿ ಮಾಡಿದ್ರು.

ಬಳಿಕ ಪಾದರಾಯನಪುರ, ಜೆಜೆಆರ್ ನಗರ, ಸಿರ್ಸಿ ಸರ್ಕಲ್, ಗೋರಿಪಾಳ್ಯದ ಒಳಗೆ ಶ್ರೀಗಣೇಶನ ಮೆರವಣಿಗೆಗೂ ಮನವಿ ಮಾಡಿದ್ರು. ಇದಕ್ಕೆ ಪೊಲೀಸ್ರು ಅನುಮತಿ ಕೊಟ್ಟಿಲ್ಲ. ‌ಮೈದಾನ ವಿಚಾರವಾಗಿ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದ್ದು, ಶ್ರೀ ಅಯ್ಯಪ್ಪ ದೇವಾಲಯದ ಬಳಿ ಗಣೇಶನ ಪ್ರತಿಷ್ಠಾಪನೆಗೆ ಸೂಚಿಸಿದ್ರು.

ಇದಕ್ಕೆ ಒಪ್ಪದ ಕಾರ್ಯಕರ್ತರು ಈದ್ಗಾ ಐಡಲ್ ಹತ್ತಿರದಲ್ಲೇ ಇರೋ ಅರಳಿಮರ ಬಳಿ ಗಣೇಶ ಕೂರಿಸಲು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ರು‌. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.

Edited By : Somashekar
PublicNext

PublicNext

03/09/2022 07:41 pm

Cinque Terre

35.6 K

Cinque Terre

1

ಸಂಬಂಧಿತ ಸುದ್ದಿ