ಬೆಂಗಳೂರು: ಗೃಹ ಸಚಿವರ ಮೇಲೆ ಆಮ್‌ಆದ್ಮಿ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ. ದಾಖಲೆ ಸಮೇತ ದೂರು ದಾಖಲಿಸಿದ ಆಮ್ ಆದ್ಮಿ, ಜಿ ಕೆಟಗರಿ ಸೈಟು ಹಂಚಿಕೆ ನಿಷೇದ ಮಾಡಲಾಗಿದ್ರು ಬದಲಿ ನಿವೇಶನ ಹಂಚಿಕೆ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ವಾಮಮಾರ್ಗದ ಮೂಲಕ ಗೃಹ ಸಚಿವರಿಗೆ ಸೈಟು ಹಂಚಿಕೆ ಮಾಡಲಾಗಿದ್ದು, ಗೃಹ ಸಚಿವರ ಜೊತೆಗೆ ಇನ್ನಿತರ ಪ್ರಭಾವಿಗಳಿಗೂ ಹಂಚಿಕೆ ಮಾಡಿರೋದಾಗಿ ಆರೋಪಿಸಿದ್ದಾರೆ. ಹಂಚಿಕೆ ಮಾಡಿರುವ ನೀತಿಯನ್ನು ಸರ್ವೋಚ್ಚ ನ್ಯಾಯಾಲಯ ಛೀಮಾರಿ ಹಾಕಿದೆ. ಬಿಡಿಎ ಆಯುಕ್ತರನ್ನು ವರ್ಗಾವಣೆಗೊಳಿಸುವಂತೆ ನ್ಯಾಯಾಲಯ ಮೌಖಿಕ ಆದೇಶ ನೀಡಿದ್ದು, ಈ ನಿಟ್ಟಿನಲ್ಲಿ ಹಲವು ದಾಖಲಾತಿ ಗಳೊಂದಿಗೆ ಲೋಕಾಯಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಆಮ್ ಆದ್ಮಿ ವಕ್ತಾರ ಮಥಾಯಿ ದೂರು ಸಲ್ಲಿಸಿದ್ದಾರೆ.
PublicNext
26/08/2022 08:33 pm