ಯಲಹಂಕ: ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಪ್ರಭಾವಿ ಬಿಜೆಪಿ ಮುಖಂಡನ ವಿರುದ್ಧ FIR ದಾಖಲಾಗಿದೆ. ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ , ಕೊಲೆ ಬೆದರಿಕೆಯ ಹಿನ್ನೆಲೆ ಚಕ್ರಪಾಣಿ ಬಂಧನ ಭೀತಿಯಿಂದ ನಾಪತ್ತೆಯಾಗಿದ್ದಾನೆ. ಹೊಸದಾಗಿ ಕಟ್ಟಿ ಗೃಹ ಪ್ರವೇಶ ಮಾಡಿರುವ ಮನೆಗೆ ಈಗ ನಿರ್ಮಾಣ ಆಗ್ತಿರುವ ಕಮರ್ಷಿಯಲ್ ಕಟ್ಟಡದಿಂದ ಧಕ್ಕೆಯಾಗುತ್ತೆ. ಆದ್ದರಿಂದ ಖಾಲಿ ಮಾಡಿಸುವ ಸಲುವಾಗಿ ಶ್ರೀಧರ ಮೂರ್ತಿ ಮೇಲೆ ಚಕ್ರಪಾಣಿ & ಗ್ಯಾಂಗ್ ಅಟ್ಯಾಕ್ ಮಾಡಿದ್ದಾರೆ ಎಂದು FIR ದಾಖಲಾಗಿದೆ.
ಬಿಜೆಪಿ ಮುಖಂಡ ಚಕ್ರಪಾಣಿ ಮನೆಯ ಮುಂದೆ ಶ್ರೀಧರ್ ಮೂರ್ತಿ ಎದುರಲ್ಲಿ ಶ್ರೀಧರಮೂರ್ತಿ ಅಪಾರ್ಟ್ಮೆಂಟ್ ಕನ್ಸ್ಟ್ರಕ್ಷನ್ ಗೇಟ್ ರಿಪೇರಿ ಮಾಡಿಸುತ್ತಿದ್ದರು. ಈ ವೇಳೆ ಚಕ್ರಪಾಣಿ, ಮುನಿರಾಜು ಮತ್ತು 10/12 ಜನರ ಗ್ಯಾಂಗ್ ಬಂದು ಏಕಾಏಕಿ ಇಲ್ಲಿ ಕೆಲಸ ಮಾಡುವಂತಿಲ್ಲ. ನಿಲ್ಲಿಸಬೇಕೆಂದು ಅವಾಜ್ ಹಾಕಿ ಶ್ರೀಧರ್ ಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ.
ಕಳೆದ 15 ದಿನಗಳ ಹಿಂದೆ ಕೊಡಿಗೇಹಳ್ಳಿಯ ವಿರೂಪಾಕ್ಷಪುರದಲ್ಲಿ ಚಕ್ರಪಾಣಿ ತಮ್ಮ ಮನೆಯ ಗೃಹ ಪ್ರವೇಶ ಮಾಡಿದ್ದರು. ಈ ವೇಳೆ ಶ್ರೀಧರ್ ಮೂರ್ತಿ ಸಹ ಗೃಹಪ್ರವೇಶಕ್ಕೆ ಹೋಗಿಬಂದಿದ್ದರು.ಪರಿಚಯವಿದ್ದು,ಹೇಗಾದರೂ ಮಾಡಿ ನಮ್ಮಕೆಲಸ ಸ್ಥಗಿತಗೊಳಿಸಿ, ಇಲ್ಲಿಂದ ನಮ್ಮನ್ನ ಖಾಲಿ ಮಾಡಿಸಲು ಚಕ್ರಪಾಣಿ ಈ ಹಲ್ಲೆಗೆ ಮುಂದಾಗಿದ್ದಾರೆ ಎಂದು ಶ್ರೀಧರ್ ಮೂರ್ತಿ ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ 1-30 ರ ಸುಮಾರಿಗೆ ಚಕ್ರಪಾಣಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದರಿಂದ ಶ್ರೀಧರ್ ಮೂರ್ತಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 143, 448, 323, 504, 506 ರಡಿ ಕೇಸ್ ದಾಖಲಾಗಿದೆ.ಕೊಡಿಗೆಹಳ್ಳಿ ಪೊಲೀಸರು FIR ದಾಖಲಿಸುತ್ತಿದ್ದಂತೆ ಚಕ್ರಪಾಣಿ ನಾಪತ್ತೆಯಾಗಿದ್ದು, ಪೊಲೀಸರು ಶೋಧಾಕಾರ್ಯ ಮುಂದುವರೆಸಿದ್ದಾರೆ.
ಸುರೇಶ್ ಬಾಬು..ಪಬ್ಲಿಕ್ ನೆಕ್ಸ್ಟ್..ಯಲಹಂಕ..
PublicNext
30/06/2022 04:34 pm