ಬೆಂಗಳೂರು: ಆ್ಯಸಿಡ್ ದಾಳಿಗೊಳಗಾಗಿದ್ದ ಯುವತಿಯ ಆರೋಗ್ಯವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ತೆರಳಿ ಆರೋಗ್ಯ ಸಚಿವ ಸುಧಾಕರ್
ವಿಚಾರಿಸಿದರು. ಸಂತ್ರಸ್ತೆಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತೆ ಎಂದ ಸಚಿವರು, ಯುವತಿ ಗುಣಮುಖರಾದ ನಂತರ ಸರ್ಕಾರಿ ಕೆಲಸ ಕೊಡುವ ಭರವಸೆಯನ್ನೂ ನೀಡಿದ್ರು.
ಶೀಘ್ರದಲ್ಲೇ ಆರೋಪಿ ನಾಗೇಶ್‌ನನ್ನು ಪೊಲೀಸ್ರು ಬಂಧಿಸ್ತಾರೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜತೆ ಮಾತನಾಡುತ್ತೇನೆ. ಯುವತಿಗೆ ಸ್ಕಿನ್ ಬ್ಯಾಂಕ್‌ನಿಂದ ಸ್ಕಿನ್‌ನೀಡಲಾಗುವುದು. ಆ್ಯಸಿಡ್ ದಾಳಿಯಿಂದಾಗಿ ಶೇ.35ರಷ್ಟು ಬರ್ನ್ ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯುವತಿಯ ಸ್ಥಿತಿ ಸ್ಪಲ್ಪ ಕ್ಲಿಷ್ಟಕರವಾಗಿಯೇ ಇದೆ.
ಬರ್ನಿಂಗ್ ಕೇಸ್ ಬಹಳ ಬೇಗ ರಿಕವರಿ ಆಗುವಂಥದ್ದಲ್ಲ. ಬಹಳ ಎಚ್ಚರಿಕೆಯಿಂದಲೇ ಚಿಕಿತ್ಸೆ ನೀಡಬೇಕಾಗಿದೆ. ಯುವತಿ ಬೇಗ ಗುಣಮುಖರಾಗಲಿ ಎಂದು ಸಚಿವ ಸುಧಾಕರ್ ಆಶಿಸಿದರು.
PublicNext
30/04/2022 05:16 pm