ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಣ್ಯರ ಮನೆ ಭದ್ರತೆಗೆ ನಿಷ್ಠಾವಂತರಿಗೇ ಒತ್ತು; ʼನಿಯತ್ತಿನ ಸಿಬ್ಬಂದಿʼ ಹುಡುಕಾಟದಲ್ಲಿ ನಗರ ಪೊಲೀಸ್ರು?

ಬೆಂಗಳೂರು: ಇಲಾಖೆ ಮರ್ಯಾದೆ ಹೋದ ಮೇಲೆ ಅಧಿಕಾರಿಗಳು ಎಚ್ಚೆತ್ತು ಕೊಂಡ್ರಾ? ಸಿಎಂ ಮನೆಗೆ ನಿಯೋಜಿಸಿದ್ದ ಸಿಬ್ಬಂದಿಯಿಂದ ಗಾಂಜಾ ಡೀಲ್ ಪ್ರಕರಣದಿಂದ ಮರ್ಯಾದೆ ಹೋದ ನಂತರ ಬೆಂಗಳೂರು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಂತೆ ಕಾಣ್ತಿದೆ. ಗಣ್ಯರ ಮನೆಗಳ ಭದ್ರತೆಗೆ ದಕ್ಷ, ನಿಷ್ಠಾವಂತ, ಪ್ರಾಮಾಣಿಕ ಸಿಬ್ಬಂದಿ ಆಯ್ಕೆ ಮಾಡಿ ಕಳುಹಿಸುವಂತೆ ವಯರ್‌ ಲೆಸ್ ಮೂಲಕವೇ ಇಲಾಖೆಯ ಅಧಿಕಾರಿಗಳಿಗೆ ಸಂದೇಶ ರವಾನೆಯಾಗಿದೆ.

ಸಿಎಂ, ರಾಜ್ಯಪಾಲರು, ಗೃಹ ಸಚಿವರು, ನ್ಯಾಯಾಧೀಶರ ಮನೆ ಭದ್ರತೆಗೆ ಸಿಬ್ಬಂದಿ ನಿಯೋಜನೆ ವೇಳೆ ಇನ್‌ ಸ್ಪೆಕ್ಟರ್‌ ಗಳು, ಸಬ್ ಇನ್‌ ಸ್ಪೆಕ್ಟರ್‌ ಗಳು ಎಚ್ಚರ ವಹಿಸಬೇಕು. ಹೀಗಂತ ಆಗ್ನೇಯ ವಿಭಾಗದ ಡಿಸಿಪಿ, ತಮ್ಮ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ.

ಕೋರಮಂಗಲ ಪೊಲೀಸರಿಂದ ಸಿಎಂ ಮನೆ ಮುಂದೆ ಗಾಂಜಾ ಮಾರಾಟ ಕೇಸ್ ಆದ್ಮೇಲೆ ಆಗ್ನೇಯ ವಿಭಾಗ ಡಿಸಿಪಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು.

ನೋಟಿಸ್ ನಂತರ ಎಚ್ಚೆತ್ತ ಡಿಸಿಪಿ ಶ್ರೀನಾಥ್ ಜೋಷಿ, ತಮ್ಮ ವಿಭಾಗದ ಅಧಿಕಾರಿ, ಸಿಬ್ಬಂದಿಗೆ ಈ ರೀತಿ ಸಂದೇಶ ರವಾನಿಸಿದ್ದಾರೆ‌. ಇದೇ ಗಾಂಜಾ ಕೇಸ್ ನಲ್ಲಿ ಆರ್‌ ಟಿ ನಗರ ಇನ್‌ ಸ್ಪೆಕ್ಟರ್ ಅಶ್ವಥ್ ಗೌಡ ಹಾಗೂ ಸಬ್ಇನ್‌ ಸ್ಪೆಕ್ಟರ್ ವೀರಭದ್ರ ಸಿಕ್ಕಿ ಬಿದ್ದು, ಸಸ್ಪೆಂಡ್ ಆಗಿದ್ದಾರೆ.

Edited By : Manjunath H D
PublicNext

PublicNext

21/01/2022 02:19 pm

Cinque Terre

42.97 K

Cinque Terre

0

ಸಂಬಂಧಿತ ಸುದ್ದಿ