ಚಾಮರಾಜಪೇಟೆ : ಈದ್ಗಾ ಮೈದಾನದಲ್ಲಿ ಗಣೇಶ ಕುರಿಸೋ ವಿಚಾರವಾಗಿ ಇಂದು ತೀರ್ಪು ಹೊರ ಬೀಳಲಿದೆ. ಈ ಹಿನ್ನೆಲೆ ಮೈದಾನದ ಸುತ್ತ ಪೊಲೀಸ್ ಬಿಗಿ ಭದ್ರತೆ ಮಾಡಿಕೊಂಡಿದ್ದು. ಅನುಮತಿ ಸಿಕ್ರು ಸಿಗದಿದ್ರು ಗಲಾಟೆಯಾಗುವ ಸನ್ನಿವೇಶ ಎದುರಾಗಬಹುದು ಎಂದು ಸಾವಿರಾರು ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ 1240 ಮಂದಿ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆಯಾಗಿದ್ದಾರೆ. ಇಬ್ಬರು ಡಿಸಿಪಿ, 21 ಜನ ಎಸಿಪಿ, 50 ಜನ ಇನ್ಸ್'ಪೆಕ್ಟರ್, 120 ಮಂದಿ RAF ಸಿಬ್ಬಂದಿ. ಆರು KSRP ತುಕಡಿ ಸೇರಿ 1240 ಮಂದಿ ಪೊಲೀಸರು ಭದ್ರತೆಗೆ ನಿಯೋಜನೆಯಾಗಿದ್ದಾರೆ.
ಈ ಹಿನ್ನೆಲೆ ಚಾಮರಾಜಪೇಟೆ ಮೈದಾನ ಸುತ್ತಾಮುತ್ತ ಪೊಲೀಸರು ರೂಟ್ ಮಾರ್ಚ್ ನಡೆಸಿದ್ರು. ಸದ್ಯ ಚಾಮರಾಜಪೇಟೆ ಮೈದಾನದ ಸುತ್ತಲೂ ಬ್ಯಾರೀಕೇಡ್ ಹಾಕಿದ್ದು, ಒಂದು ಕಡೆ ಮಾತ್ರ ಮೈದಾನಕ್ಕೆ ಎಂಟ್ರಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಮುಂಜಾಗ್ರತ ಕ್ರಮವಾಗಿ ಪಶ್ಚಿಮ ವಿಭಾಗದಲ್ಲಿ ರೌಡಿಗಳ ಮನೆ ಮೇಲೆ ರೇಡ್ ಮಾಡಿ ಸರ್ಚ್ ಮಾಡಿದ್ದು, ಪರಾರಿಯಾದ ರೌಡಿಗಳನ್ನ ಸಹ ಪತ್ತೆ ಮಾಡಿ ವಾರ್ನಿಂಗ್ ಮಾಡಿ ೧೧೦ರ ಅಡಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
ಭದ್ರತೆಯಲ್ಲಿ ವಿಶೇಷವಾಗಿ ಆರ್‌ಎಎಫ್ ಟೀಂ ಇದ್ದು ಡ್ರೋಣ್ ಮೂಲಕ ಬಂದೋಬಸ್ತ್‌ಗೆ ಮೈದಾನ ಸುತ್ತಾ ನಿಗಾವಹಿಸಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಖಾ ಸುಮ್ಮನೆ ಊಹಾಫೊಹ ಸುದ್ದಿಗಳ ಹರಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.
PublicNext
30/08/2022 02:50 pm