ಬೆಂಗಳೂರು: ಚಾಮರಾಜಪೇಟೆಯಲ್ಲಿನ ಮೈದಾನ ಬಿಬಿಎಂಪಿಗೆ ಸೇರಿದ್ದು ಅಂತಾ ಹಿಂದೂ ಪರ ಸಂಘಟನೆಗಳು ವಾದಿಸುತ್ತಿತ್ತು. ಇದು ಬಿಬಿಎಂಪಿ ಸ್ವತ್ತು ಅಂತಾ ಬಿಬಿಎಂಪಿ ವಿಶೇಷ ಆಯುಕ್ತರು ಹೇಳೊ ಮೂಲಕ ಈ ಮೈದಾನ ಸಾರ್ವಜನಿಕರ ಆಸ್ತಿ ಅನ್ನೋದನ್ನ ಖಚಿತ ಪಡಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆ ಮೈದಾನದ ವಿಚಾರ ದಿನೇ ದಿನೆ ತಾರಕ್ಕೇರ್ತಿತ್ತು. ಇದು ಬಿಬಿಎಂಪಿ ಸ್ವತ್ತು. ಇಲ್ಲಿ ನಮಗೂ ಸಭೆ, ಸಮಾರಂಭ ಮಾಡಲು ಅವಕಾಶ ಕೊಡಿ ಅಂತಾ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ವು. ಇದ್ರ ಬೆನ್ನಲ್ಲೇ, ಇಂದು ಬಿಬಿಎಂಪಿ ವಿಶೇಷ ಆಯುಕ್ತರು, ಇದು ಬಿಬಿಎಂಪಿ ಸ್ವತ್ತು ಅನ್ನೋ ಹೇಳಿಕೆಯನ್ನ ನೀಡಿದ್ದು, ವರ್ಷದಲ್ಲಿ ಎರಡು ದಿನ ಮುಸ್ಲಿಮರಿಗೆ ಅವಕಾಶ ನೀಡಲಾಗುತ್ತೆ. ಉಳಿದ ದಿನಗಳಲ್ಲಿ ಇತರರಿಗೆ ಸಭೆ, ಸಮಾರಂಭಕ್ಕೆ ಅವಕಾಶ ನೀಡಲಾಗುತ್ತೆ. ಆದ್ರೆ, ಪೂರ್ವ ವಲಯದ ಜಂಟಿ ಆಯುಕ್ತರ ಅನುಮತಿ ಕಡ್ಡಾಯ ಅಂತಾ ಹೇಳಿದ್ದಾರೆ.
ಮೊದಲ ಹಂತದಲ್ಲಿ ಹಿಂದೂ ಸಂಘಟನೆಗಳಿಗೆ ಜಯ ಸಿಕ್ಕಿದ್ದು, ಬಿಬಿಎಂಪಿ ಮೈದಾನದಲ್ಲಿ ನಿರ್ಮಾಣವಾಗಿರುವ ಈದ್ಗಾ ಟವರ್ ನ್ನು ತೆಗೆಯಬೇಕು ಅನ್ನೋ ಡಿಮ್ಯಾಂಡ್ ಇಟ್ಟಿದ್ದಾರೆ. ಇಲ್ಲದಿದ್ರೆ, ಒಂದು ತಿಂಗಳ ಒಳಗೆ ನಾವು ಅಲ್ಲಿ ಶಿವಲಿಂಗ ತಂದು ಇಡ್ತೀವಿ ಅಂತಾ ವಿಶ್ವ ಸನಾತನ ಪರಿಷತ್ತು ಅಧ್ಯಕ್ಷ ಎಸ್.ಭಾಸ್ಕರನ್ ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್ 15 ರಂದು ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲು ಅವಕಾಶ ಕೋರಿ, ನಾಳೆ ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತರನ್ನ ಭೇಟಿ ಮಾಡಲಿದ್ದಾರೆ.
ಇನ್ನು ಮೈದಾನ ಬಿಬಿಎಂಪಿ ಸ್ವತ್ತು ಅಂದಮೇಲೆ, ಕನ್ನಡಪರ ಹೋರಾಟಗಾರರು ಸಂಭ್ರಮಾಚರಣೆ ಮಾಡಲು ಯತ್ನಿಸಿದ್ರು.
ಆದರೆ, ಅದಕ್ಕೆ ಚಾಮರಾಜಪೇಟೆ ಪೊಲೀಸರು ಸಿಹಿ ಹಂಚಲು ಅವಕಾಶ ಕೊಡದೆ ಮೈದಾನಕ್ಕೆ ತೆರಳದಂತೆ ತಡೆದ್ರು. ತಡೆದಿದ್ದಕ್ಕೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ಯುದ್ಧ ನಡೆಯಿತು. ಮೈದಾನ ಬಳಿ ಕೆಲಕಾಲ ಬಿಗುವಿನ ವಾತಾವರಣ ಏರ್ಪಟ್ಟಿತ್ತು.
ಆಗಸ್ಟ್ 15ರಂದು ಧ್ವಜಾರೋಹಣಕ್ಕಾಗಿ ನಾಳೆ ಸನಾತನ ಪರಿಷತ್ತು ಅನುಮತಿ ಕೇಳಲಿದೆ. ನಾಳೆ ಅನುಮತಿ ಸಿಗುತ್ತಾ, ಇಲ್ವಾ ಕಾದು ನೋಡ್ಬೇಕು.
Kshetra Samachara
07/06/2022 11:49 am