ಬೆಂಗಳೂರು: ಶಾಸಕ ಜಮೀರ್ ಅಹಮದ್ ರಿಗೆ ಎಸಿಬಿಯಿಂದ ಬುಲಾವ್ ಹಿನ್ನೆಲೆ ಎಸಿಬಿ ಕಚೇರಿಗೆ ಜಮೀರ್ ವಿಚಾರಣೆಗೆ ಹಾಜರಾಗಿದ್ದಾರೆ.ದಾಳಿ ಬಳಿಕ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿತ್ತು.
ದಾಳಿಯಲ್ಲಿ ಅಸಮತೋಲನ ಆಸ್ತಿ ಗಳಿಕೆ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿತ್ತು.10 ದಿನದ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಪಿಎಂಎಲ್ಎ ಕಾಯ್ದೆ ಅನ್ವಯ ಇಡಿ ಕೊಟ್ಟ ಮಾಹಿತಿ ಮೇರೆಗೆ ದೂರು ದಾಖಲಾಗಿತ್ತು. ಇಡಿ ದಾಖಲಿಸಿದ ಇಸಿಐಆರ್ ತನಿಖೆಯಲ್ಲಿ ಜಮೀರ್ ಅಹಮದ್ ಸಾರ್ವಜನಿಕ ಸೇವಕರಾಗಿದ್ದು, 2005 ರಿಂದ ಆಗಸ್ಟ್ 5 2021 ರ ಅವಧಿಯಲ್ಲಿ ತನ್ನ ಅಧಿಕಾರವನ್ನ ದುರುಪಯೋಗ ಮಾಡಿ ಈ ವೇಳೆ ಅಪಾರ ಪ್ರಮಾಣದ ಆಸ್ತಿ ಗಳಿಸಿರೋ ಅಂಶ ಪತ್ತೆಯಾಗಿದೆ. ಜಾರಿ ನಿರ್ದೇಶನಾಲಯ ನೀಡಿದ ಮಾಹಿತಿಯ ಪ್ರಕಾರ
ಜಮೀರ್ ಒಟ್ಟು ಆಸ್ತಿ-73,94,36,027
ಆದಾಯ-4,30,48,790ರೂ.
ವೆಚ್ಚ-17,80,18,000ರೂ.
ಹಾಗೂ ಆದಾಯಕ್ಕಿಂತ 87,44,05,057 ರೂ. ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖ ವಾಗಿತ್ತು.
ಜಮೀರ್ 20 ಗುಂಟೆ ಕಾಗದಲ್ಲಿ ಅಂದಾಜು 80 ಕೋಟಿಯ ಭವ್ಯ ಮನೆ ನಿರ್ಮಿಸಿದ್ದಾರೆ.ಮನೆ ನಿರ್ಮಾಣಕ್ಕೆ ಬಳಸಿರುವ ಶ್ವೇತ ಶಿಲೆ, ಅರೆಬಿಕ್ ಶೈಲಿಯಲ್ಲಿ ಮನೆಯ ನಿರ್ಮಾಣ ಇಟಾಲಿಯನ್ ಮಾರ್ಬಲ್ಸ್ 5 ಕೋಟಿ ಮೌಲ್ಯದ ಆಸ್ತಿ. ಸ್ಯಾಂಡ್ ವಿಚ್ ಗಾಜುಗಳ ಬಳಸಲಾಗಿದ್ದು, ಟೀಕ್ ವುಡ್ ಕಿಟಿಕಿ ಮತ್ತು ಬಾಗಿಲುಗಳ ನಿರ್ಮಾಣ ಹಾಗೂ ವೈಭವಪೂರಿತ ಸೀಲಿಂಗ್ ಲೈಟ್‌ಗಳ ಅಳವಡಿಕೆ ಮಾಡಿರೊದಕ್ಕೆ ಎಸಿಬಿ ಬಿಲ್ ಕೇಳಿದೆ. ಇದ್ರ ಜೊತೆಗೆ 87,44,05,057 ರೂಪಾಯಿ ಮೂಲದ ದಾಖಲೆ ಕೇಳಿದೆ. ಜೊತೆಗೆ ನ್ಯಾಷನಲ್ ಟ್ರಾವೆಲ್ಸ್‌ನ ಆದಾಯದ ಮೊತ್ತ ಮಾಹಿತಿಯನ್ನೂ ಕೇಳಲಾಗಿದೆ.
Kshetra Samachara
06/08/2022 02:34 pm