ವರದಿ- ಗಣೇಶ್ ಹೆಗಡೆ
ಬೆಂಗಳೂರು : ರಾಜ್ಯ ಮಟ್ಟದ ಬೇಡ ಜಂಗಮ ಜನಾಂಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸತ್ಯ ಪ್ರತಿಪಾದನ ಸತ್ಯಾಗ್ರಹ ನಡೆಯುತ್ತಿದ್ದು, ಈಗಾಗ್ಲೇ ಪರಿಶಿಷ್ಟ ಪಂಗಡದಲ್ಲಿರು ಜಂಗಮರೆ ಬೇರೆ, ಬೇಡ ಜಂಗಮರೆ ಬೇರೆ ಎನ್ನುವ ವಾದವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಸದ್ಯ ಪರಿಶಿಷ್ಟ ಜಾತಿಯಲ್ಲಿ ಸವಲತ್ತುಗಳನ್ನು ಬೇಡ ಜಂಗಮರು ಪಡೆಯುತ್ತಿದ್ದು, ಕೆಲ ರಾಜಕಾರಣಿಗಳ ಒತ್ತಡದಿಂದ ಬೇಡ ಜಂಗಮರ ದಾಖಲಾತಿಗಳನ್ನು ಪರಿಶಿಷ್ಟ ಜಾತಿಯ ಸವಲತ್ತುಗಳಿಗೆ ಅಧಿಕಾರಿಗಳು ತಿರಸ್ಕರಿಸುತ್ತಿದ್ದರು.
ಪರಿಶಿಷ್ಟ ಪಂಗಡದಲ್ಲಿರುವ ವೀರಶೈವ ಲಿಂಗಾಯತ ಉಪ ಜಾತಿಯಾಗಿ ಬೇಡ ಜಂಗಮರು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಆದರೆ ನಮ್ಮ ಜನಾಂಗವನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡುವ ಹುನ್ನಾರ ನಡೆದಿದೆ. ಇದನ್ನು ವಿರೋಧಿಸಿ ನಾವು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ. ಶಾಂತಿಯುತ್ತ ಸತ್ಯಾಗ್ರಹಕ್ಕಾಗಿ ಆಗಮಿಸುತ್ತಿದ್ದ ನಮ್ಮವರನ್ನು ತಡೆಯಲಾಗಿದೆ. ತಕ್ಷಣ ಅವರನ್ನು ಬಿಡುಗಡೆಗೊಳಿಸ ಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.
Kshetra Samachara
30/06/2022 05:19 pm