ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರದ ಮೇಲೆ ಕಿಡಿಕಾರಿದ ಕುರುಬೂರು ಶಾಂತಕುಮಾರ್

ಬೆಂಗಳೂರು : ರಾಷ್ಟ್ರೀಯ ಕಿಸಾನ್ ಯೂನಿಯನ್ ರೈತನಾಯಕ ರಾಕೇಶ್ ಟಿಕಾಯಿತ ಮೇಲೆ ಕಪ್ಪುಮಸಿ ,ಹಲ್ಲೆಗೆ ಯತ್ನ ಗೂಂಡಾ ವರ್ತನೆ ಖಂಡನೀಯ , ಇದು ರಾಜಕೀಯ ಕೈವಾಡ ಇದೆ..ಈ ಹಿನ್ನಲೆ‌ ಬೆಂಗಳೂರಿನ ಗಾಂಧಿ ಭವನದಲ್ಲಿ ಕಿಡಿಗೇಡಿಗಳು ಪತ್ರಕರ್ತರ ಸೋಗಿನಲ್ಲಿ ಪತ್ರಿಕಾಗೋಷ್ಠಿ ಸಮಯದಲ್ಲಿ ಗೂಂಡಾ ವರ್ತನೆ ತೋರಿ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಮಸಿ ಬಳಿದು ಹಲ್ಲೆಗೆ ಯತ್ನ ಮಾಡಿರುವುದು ಖಂಡನೀಯ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರೆಸ್ ಮೀಟ್ ನಡೆಸಲಾಗಿದೆ.

ರಾಜ್ಯ ರೈತ ಮುಖಂಡನ ಸ್ಟಿಂಚ್ ಆಪರೇಷನ್ ಡಿಲ್ ಬಗ್ಗೆ ಹಾಗೂ ರಾಷ್ಟ್ರೀಯ ರೈತ ಮುಖಂಡರ ಬಗ್ಗೆ ಸುದ್ದಿವಾಹಿನಿ ಬಿತ್ತರಿಸಿರುವ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರುವಾಗ ರಾಷ್ಟ್ರೀಯ ರೈತ ಮುಖಂಡ ಹಾಗೂ ಮತ್ತಿತರರ ಮೇಲೆ ಕಪ್ಪು ಮಸಿ ಎರಚಿ ಹಲ್ಲೆಗೆ ಯತ್ನಿಸಿರುವುದು ರೈತ ಸಮುದಾಯಕ್ಕೆ ಮಾಡಿದ ಅಪಮಾನ ಇದು ರಾಜಕೀಯ ಪಿತೂರಿಯಾಗಿದೆ.

ಈ ಪ್ರಕರಣದ ಗಂಭೀರತೆಯನ್ನು ಅರಿತು ತಕ್ಷಣವೇ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಕಾಣದ ಕೈಗಳ ರಾಜಕೀಯ ಪಿತೂರಿಯಿಂದ ಆಗಿರುವ ಈ ಘಟನೆಯ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತೆನೆ ನಿರ್ಲಕ್ಷ್ಯ ಮಾಡಿದರೆ ರಾಜ್ಯದ್ಯಂತ ರೈತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿಲ್ಲಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

30/05/2022 08:22 pm

Cinque Terre

504

Cinque Terre

0