ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 1064 ಮನೆಗಳಿಗೆ ನೀರು ನುಗ್ಗಿ ಹಾನಿ

ಬೆಂಗಳೂರು: ಕಳೆದ ವಾರ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಹಾನಿಗೊಳಗಾದ 1,064 ಕುಟುಂಬಗಳನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದೆ ಎಂದು ಮಹದೇವಪುರ ವಲಯದ ಜಂಟಿ ಆಯುಕ್ತ ವೆಂಕಟಾಚಲಪತಿ ತಿಳಿಸಿದ್ದಾರೆ.

ಮಹದೇವಪುರ ವಲಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದ ಎಲ್ಲ ಸ್ಥಳಗಳಲ್ಲಿ ಜಮಾವಣೆ ಆಗಿದ್ದ ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ನೀರು ತಗ್ಗಿದ ನಂತರ ವಸತಿ ಬಡಾವಣೆಗಳು, ಮನೆಗಳು ಮತ್ತು ಅಪಾರ್ಟ್ ಮೆಂಟ್ ಗಳ ನೆಲಮಹಡಿಗೆ ನುಗ್ಗಿದ್ದ ನೀರನ್ನು ಹೊರಹಾಕಿ, ಕೆಸರು ಸ್ವಚ್ಛತೆ ಮಾಡಲು ಸಂಬಂಧಪಟ್ಟ ಮಾಲೀಕರಿಗೆ ಹೇಳಲಾಗಿದೆ.

ಇನ್ನೂ ಸಂತ್ರಸ್ಥ ಜನರಿಗೆ ಊಟ ಮತ್ತು ತಾತ್ಕಾಲಿಕ ವ್ಯವಸ್ಥೆ ಮಾಡುವುದಕ್ಕೆ ಮೂರುನಾಲ್ಕು ದಿನ ಕಳೆಯಿತು. ನೀರು ತಗ್ಗಿದ ನಂತರ ಪಾಲಿಕೆ ಸಿಬ್ಬಂದಿ? ವಾರ್ಡ್ ಮಟ್ಟದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ಮಾಡಿದ್ದಾರೆ. ಈ ವೇಳೆ ಒಟ್ಟು 1,064 ಮನೆಗಳಿಗೆ ನೀರು ನುಗ್ಗಿ ಆಹಾರ ಸಾಮಗ್ರಿ, ದಿನಬಳಕೆ ವಸ್ತುಗಳು ಹಾಳಾಗಿರುವುದನ್ನು ಗುರುತಿಸಲಾಗಿದೆ.

ಶಾಸಕರಿಂದ ಪರಿಹಾರ ವಿತರಣೆ:

ಮಳೆ ನೀರು ಮನೆಗಳಿಗೆ ನುಗ್ಗಿ ಹಾನಿಗೊಳಗಾದ ಕುಟುಂಬಗಳಿಗೆ ಪಾಲಿಕೆಯಿಂದ ಡೈರೆಕ್ಟ್ ಬ್ಯಾಂಕ್ ಟ್ರ್ಯಾನ್ಸ್ (ಡಿಬಿಟಿ) ಆಧಾರದಲ್ಲಿ ಹಣ ವರ್ಗಾಯಿಸಲಾಗುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಕಾರ (ಎನ್ ಆರ್ ಆರ್) ಮಾರ್ಗಸೂಚಿ ಅನುಸಾರ ತಲಾ 10 ಸಾವಿರ ರೂ. ಧನಸಹಾಯ ನೀಡಲಾಗುತ್ತದೆ.

ಈಗಾಗಲೇ ಸಂತ್ರಸ್ತರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಯ ವಿವರ ಪಡೆಯಲಾಗಿದೆ. ಸೋಮವಾರ ಮಹದೇಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಸೇರಿ ಅನೇಕ ಜನಪ್ರತಿನಿಗಳು ಪರಿಹಾರ ಧನ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.

Edited By : Nagesh Gaonkar
PublicNext

PublicNext

12/09/2022 10:38 am

Cinque Terre

33.36 K

Cinque Terre

0

ಸಂಬಂಧಿತ ಸುದ್ದಿ