ಬೆಂಗಳೂರು: ದೇವನಹಳ್ಳಿ ತಾಲೂಕಿನ ವಿಜಯಪುರ ಕೆರೆ ಕಳೆದ ರಾತ್ರಿ ಸುರಿದ ಜೋರು ಮಳೆಗೆ ಕೋಡಿಬಿದ್ದಿದೆ. ಪರಿಣಾಮ ನೂರಾರು ಎಕರೆ ರಾಗಿ, ದ್ರಾಕ್ಷಿ, ಹಣ್ಣು ತರಕಾರಿ ಬೆಳೆ ನೀರುಪಾಲಾಗಿದೆ.
ಕೆರೆಕೋಡಿಗೆ ಹೊಂದಿಕೊಂಡ ಹತ್ತಾರು ಮನೆ ಮುಳುಗಡೆ ಆಗಿವೆ. ದಕ್ಷಿಣ ಪಿನಾಕಿನಿ ನದಿಪಾತ್ರದ ವಿಜಯಪುರ ಕೆರೆ 20ವರ್ಷಗಳ ನಂತರ ಕೋಡಿಬಿದ್ದು, ಪ್ರವಾಹದ ರೀತಿಯಲ್ಲಿ ಕೆರೆ ನೀರು ಹರಿಯುತ್ತಿದೆ.
ಭಾರಿ ಮಳೆಗೆ ವಿಜಯಪುರ ಪಟ್ಟಣದ ಕೆರೆ ಅಂಚಿನಲ್ಲಿ ಜಲಪ್ರಳಯ ಉಂಟಾಗಿದೆ. ವಿಜಯಪುರ ಕೆರೆ ಕೋಡಿ ಬಿದ್ದು, ನೂರಾರು ಎಕರೆ ಬೆಳೆನಾಶ ದೃಶ್ಯ ಡ್ರೋನ್ನಲ್ಲಿ ಸೆರೆಯಾಗಿದೆ.
ಡ್ರೋನ್ ನಲ್ಲಿ ವಿಜಯಪುರ ಕೆರೆಕೋಡಿ ಪಕ್ಕದ ಜಮೀನು ನದಿಯಂತಾಗಿ ಕಾಣುತ್ತಿವೆ.ಬೆಳೆ ನಾಶದಿಂದ ರೈತರು ಕಂಗಾಲಾಗಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..
PublicNext
05/09/2022 05:26 pm