ಬೆಂಗಳೂರು: ಬಳ್ಳಾರಿ ರಸ್ತೆ ದೇವನಹಳ್ಳಿ ಬೈಪಾಸ್ ಕೆಂಪೇಗೌಡ ಜಂಕ್ಷನ್, ಪ್ರತಿಮಳೆಗೆ ಜಲಾವೃತವಾಗ್ತಿದೆ. ರಾಷ್ಟ್ರೀಯ ಹೆದ್ದಾರಿಯಿಂದ ದೇವನಹಳ್ಳಿಗೆ ಸಂಪರ್ಕ ಕಲ್ಪಿಸುವ ಬೈಪಾಸ್ ತಗ್ಗುಪ್ರದೇಶದಲ್ಲಿದ್ದು, ಮಳೆ ಬಂದ್ರೆ ಸಾಕು ಚಿಕ್ಕಬಳ್ಳಾಪುರ & ದೇವನಹಳ್ಳಿ ಕಡೆಯಿಂದ ಬರುವ ನೀರು ನೇರವಾಗಿ ಸರ್ಕಲ್‌ನ ಇಳಿಜಾರು ಪ್ರದೇಶದಲ್ಲಿ ಸೇರುತ್ತದೆ.
ಹೆದ್ದಾರಿ ಅಕ್ಕಪಕ್ಕದ ಚರಂಡಿ ವ್ಯವಸ್ಥೆಯು ಅಸಮರ್ಪಕ ಕಾಮಗಾರಿ ಪರಿಣಾಮ ಮಳೆ ನೀರು ಚರಂಡಿಯಲ್ಲಿ ಹರಿಯದೇ ರಸ್ತೆಯ ಮೇಲೆ ಹರಿಯುತ್ತದೆ. ಈ ಬಗ್ಗೆ ಎಷ್ಟೇ ದೂರು ನೀಡಿದರು PWD & ಪುರಸಭೆ ಚರಂಡಿ & ರಾಜಕಾಲುವೆಯಲ್ಲಿ ಮಳೆ ನೀರು ಹರಿದು ಮುಂದಕ್ಕೆ ಹೋಗುವ ವ್ಯವಸ್ಥೆ ಕಲ್ಪಿಸಬೇಕಿದೆ.
ಮಳೆ ಬಂದು ತಗ್ಗುಪ್ರದೇಶದ ದೇವನಹಳ್ಳಿ ಬೈಪಾಸ್ ಜಂಕ್ಷನ್ ಸಮಸ್ಯೆಗಳ ಆಗರವಾಗ್ತಿದೆ. ಬೈಕ್ ಸವಾರರು, ರಸ್ತೆಯ ಅಕ್ಕಪಕ್ಕದ ಅಂಗಡಿಯವರು, ಮಳೆ ನೀರಿನಿಂದ ಪಡರದಾಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ..
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್.. ದೇವನಹಳ್ಳಿ..
Kshetra Samachara
29/08/2022 09:13 pm