ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸುರಿದ ಧಾರಕಾರ ಮಳೆಯಿಂದ ಸಾಕಷ್ಟು ಅವಾಂತರ ಸಂಭವಿಸಿದೆ. ಜನರು ಮಳೆಯಿಂದ ಪರದಾಡುವಂತಾಗಿದೆ. ಎಷ್ಟೋ ಮನೆಗಳಿಗೆ ಮಳೆ ನೀರು ನುಗ್ಗಿ ಸಾಕಷ್ಟು ಅವಾಂತರ ಕೂಡ ಉಂಟಾಗಿದೆ.
ನಿನ್ನೆ ರಾಜಧಾನಿಯಲ್ಲಿ ಸುರಿದ ಮಳೆಯಿಂದಾಗಿ ಯಲಚೇನಹಳ್ಳಿ ವಾರ್ಡ್ ಕನಕನಗರದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ.ರಾಜಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗಿದೆ. ಇನ್ನು 20ಕ್ಕೂ ಹೆಚ್ಚು ಬೈಕ್‌ಗಳು ಕೂಡ ಜಲಾವೃತವಾಗಿದೆ. ಮನೆಯಲ್ಲಿದ್ದ ಸಾಕಷ್ಟು ವಸ್ತುಗಳು ಕೂಡ ಹಾನಿಗೊಳಗಾಗಿದೆ. ಕುಮಾರಸ್ವಾಮಿ ಲೇಔಟ್‌ನಲ್ಲಿಯೂ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ಇನ್ನು ಯಶವಂತಪುರದ ಸರ್ಕಲ್ ಬಳಿ ಭಾರಿ ಗಾತ್ರದ ಮರ ಧರೆಗುರುಳಿದೆ. ಸದ್ಯ ಬೆಂಗಳೂರಿನ ಯಶವಂತಪುರ ಸರ್ಕಲ್ ಬಳಿ ಭಾರಿ ಗಾತ್ರದ ಮರ ಬಿದ್ದಿದೆ ಆದ್ರೆ ಸದ್ಯ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಅನಾಹುತ ತಪ್ಪಿದೆ.
ಇನ್ನು ಮಹಾಲಕ್ಷ್ಮಿ ಲೇಔಟ್ ರಾಜೇಂದ್ರ ಟೆಕ್ಸ್‌ಟೈಲ್ಸ್ ಕೊಳಗೇರಿಯ 10 ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಳೆಯ ನೀರನ್ನ ಹೊರಹಾಕುವುದರಲ್ಲಿ ಜನರು ಹೈರಾಣಾಗಿ ಹೋಗಿದ್ದಾರೆ. ಅಷ್ಟೇ ಅಲ್ಲದೇ ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ಮರದ ರೆಂಬೆ ಬಿದ್ದ ಪರಿಣಾಮ ಫುಟ್ ಪಾತ್‌ಗೆ ಅಳವಡಿಸಲಾಗಿದ್ದ ವಿಭಜಕಗಳು ಜಖಂ ಆಗಿದೆ. ಅದೃಷ್ಟವಶಾತ್ ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರಾಜಕಾಲುವೆ ಭಾಗದ ಜನರಂತೂ ಕೊಳಚೆ ನೀರಿನಿಂದ ಮನೆ ಕ್ಲೀನ್ ಮಾಡಿಕೊಳ್ಳಲು ರಾತ್ರಿಇಡೀ ಜಾಗರಣೆ ಮಾಡಿದಾರೆ. ಬಿಟಿಎಂ ಲೇಔಟ್‌ನಲ್ಲೂ ಮನೆಗಳಿಗೆ ನೀರು ನುಗ್ಗಿದ್ದು, ಬಿಟಿಎಂ ಲೇಔಟ್ ನಿವಾಸಿಗಳು ಮಳೆಯ ನೀರು ಹೊರಹಾಕುವುದರಲ್ಲಿ ಹೈರಾಣಾಗಿ ಹೋಗಿದ್ದಾರೆ.
Kshetra Samachara
31/07/2022 05:43 pm