ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರ.ಎಲ್ಲೆಂದರಲ್ಲಿ ಪ್ರತ್ಯಕ್ಷ ಆಗಬಹುದು ಬುಸ್ ಬುಸ್ ನಾಗ. ಹೌದು ದಿನನಿತ್ಯ ವಾಕಿಂಗ್, ವ್ಯಾಯಮಕ್ಕೆ ಕಬ್ಬನ್ ಪಾರ್ಕ್ ಸಾಕಷ್ಟು ಜನ ಜಮಾಯಿಸುತ್ತಾರೆ.
ವಾಕಿಂಗ್ ಮಾಡಿ ಸುಸ್ತಾಯ್ತು ಅಂತ ಇಲ್ಲಿ ಹುಲ್ಲಿನ ಮೇಲೆ ಕುಳಿತುಕೊಳ್ಳು ಮುಂದಾದರೆ ಮುಗೀತು. ಅಲ್ಲಿ ವಿಷಕಾರಿ ಹಾವುಗಳ ಪ್ರತ್ಯಕ್ಷ ಆಗಿಬಿಡಬಹುದು. ಅದಕ್ಕೇನೆ ಕುಳಿತುಕೊಳ್ಳುವ ಮುನ್ನ ಎಚ್ಚರ ವಹಿಸಬೇಕು ಎಂದು ಬಿಬಿಎಂಪಿ ಈಗಾಗಲೇ
ಬೆಂಗಳೂರಿನ ಜನರಿಗೆ ಹೇಳಿದೆ.
ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಹಾವುಗಳ ಹ್ಯಾಚಿಂಗ್ ಟೈಮ್. ಈ ವೇಳೆ ಮಳೆ, ಚಳಿ ಇರುವುದರಿಂದ ಬೆಚ್ಚಗಿನ ಜಾಗ ಹುಡುಕಿಕೊಂಡು ಹಾವುಗಳು ಹೋಗುತ್ತೆ. ಹಾಗಾಗಿಯೇ ಈಗ ಪ್ರತಿದಿನ ನಗರದಲ್ಲಿ 50ಕ್ಕೂ ಹೆಚ್ಚಿನ ವಿಷಕಾರಿ ಹಾವುಗಳುನ್ನು ಸೆರೆ ಹಿಡಿಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಆದಷ್ಟು ಎಚ್ಚರಿಕೆಯಿಂದ ಇರಲು ಬಿಬಿಎಂಪಿ ರೆಸ್ಕ್ಯೂ ಟೀಮ್ ಕೂಡ ಜನರಲ್ಲಿ ಮನವಿ ಮಾಡಿಕೊಂಡಿದೆ.
PublicNext
11/07/2022 12:57 pm