ವರದಿ: ಬಲರಾಮ್ ವಿ
ಬೆಂಗಳೂರು: ಭಾರೀ ಮಳೆಯಾದ ಪರಿಣಾಮ ರಸ್ತೆಯುದ್ಧಕ್ಕೂ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಆರ್ ಪುರದ ಭಟ್ಟರಹಳ್ಳಿ, ಪವಿತ್ರಾ ಬಡಾವಣೆ ಸೇರಿದಂತೆ ಹಲವಡೆ ಮಳೆ ಸುರಿದ ಹಿನ್ನಲೆಯಲ್ಲಿ ರಸ್ತೆಯಲ್ಲೇ ನೀರು ನಿಂತುಕೊಂಡಿದೆ.
ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಮಳೆ ನೀರು ಸರಾಗವಾಗಿ ಹರಿಯದಿರುವುದೇ ಈ ಅವಾಂತರಕ್ಕೆ ಕಾರಣವಾಗಿದ್ದು ಜನ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಮುಂದೆ ಸಾಗಿದ್ದಾರೆ. ಮಾತ್ರವಲ್ಲದೆ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Kshetra Samachara
17/05/2022 07:05 pm