ಬೆಂಗಳೂರು: ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ಸಂಪೂರ್ಣ ಬೆಂಗಳೂರು ನಗರ ಸಂಪೂರ್ಣ ತತ್ತರಿಸಿ ಹೋಗಿದೆ. ಬಿಟ್ಟು ಬಿಡದೆ ಬಂದಂತಹ ಭಾರಿ ಮಳೆಗೆ ಬೆಂಗಳೂರಿನಲ್ಲಿ ಸಾಲು-ಸಾಲು ಅವಾಂತರಗಳೂ ಆಗಿವೆ.ಒಂದೇ ಏರಿಯಾದಲ್ಲಿ ಐದು ಮರಗಳು ಬಿದ್ದು ಕಾರುಗಳು ಜಖಂ ಗೊಂಡಿದೆ.ಇನ್ನೂ ಸಾಲು ಸಾಲು ಬಿದ್ದಂತಹ ಮರಗಳಿಂದ ವಾಹನ ಸವಾರರು ಪರದಾಡಿ ಬಿಟ್ಟಿದ್ದಾರೆ. ಮಹಾ ಮಳೆ ಹೊಡೆತಕ್ಕೆ ಮನೆಗಳಲ್ಲಿ ನೀರು ನುಗ್ಗಿ ಜನರು ಪರದಾಡಿ ಹೋಗಿದ್ದಾರೆ. ವರುಣನ ಆರ್ಭಟಕ್ಕೆ ಸಂಪೂರ್ಣ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದೆ.
ಯಾವ ಯಾವ ಏರಿಯಾ ನೆನ್ನೆ ಸುರಿದ ಭಾರೀ ಮಳೆಗೆ ತತ್ತರಿಸಿ ಹೋಗಿದೆ ಅನ್ನೋ ಫುಲ್ ಡೀಟೇಲ್ಸ್ ಇಲ್ಲಿದೆ.
ಏರಿಯಾ ನಂಬರ್ 1 ಜಯದೇವ
ಬೆಂಗಳೂರಿನ ಜಯದೇವ ಅಂಡರ್ ಪಾಸ್ ಬಳಿ ನೀರು ತುಂಬಿ ಕಾರು ನೀರಿನಲ್ಲಿ ಸಿಲುಕಿತ್ತು. ನಂತರ ಕಾರಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಲಾಯಿತು.ಅಂಡರ್ ಪಾಸ್ ನಲ್ಲಿ ಮೂರು ಅಡಿ ಎತ್ತರ ನೀರು ನಿಂತು ಸಂಪೂರ್ಣ ಬನ್ನೇರುಘಟ್ಟ ರಸ್ತೆ ಟ್ರಾಫಿಕ್ ಜಾಮ್ ಆಯಿತು.ವಾಹನ ಸವಾರರು ಬನ್ನೇರುಘಟ್ಟ ರಸ್ತೆಯಲ್ಲಿ ಹೋಗಲು ಪರದಾಡಬೇಕಾಯಿತು.
ಏರಿಯಾ ನಂಬರ್ 2 ಜೆಪಿ ನಗರ ಸಿಗ್ನಲ್
ಬನ್ನೇರುಘಟ್ಟ ರಸ್ತೆ ಜೆಪಿ ನಗರ ಸಿಗ್ನಲ್ ನಲ್ಲಿ ಒಂದು ಬದಿಯ ರಸ್ತೆಯ ಮೇಲೆ ತುಂಬಿದಂತಹ ಮಳೆ ನೀರಿನಿಂದ ವಾಹನ ಸವಾರರು ಹೋಗಲು ಪರದಾಟ ಪಟ್ಟರು.ಇದರಿಂದ ಟ್ರಾಫಿಕ್ ಜಾಮ್ ಆಗಿ ಟ್ರಾಫಿಕ್ ನಲ್ಲಿ ಆಂಬ್ಯುಲೆನ್ಸ್ ಸಿಲುಕಿತು.ಟ್ರಾಫಿಕ್ ಜಾಮ್ ಆದ್ದರಿಂದ ಪೊಲೀಸರೇ ಮೋರಿ ಕ್ಲೀನ್ ಮಾಡಲು ಮುಂದಾದರು.
ಏರಿಯಾ ನಂಬರ್ 3 ಬಿಟಿಎಂ ಲೇಔಟ್
ಬಿಟಿಎಂ ಲೇಔಟ್ ಐಎಎಸ್ ಕಾಲೋನಿ ನಲ್ಲಿ ಮರಗಳು ಧರೆಗುರುಳಿ ಕಾರುಗಳು ನಜ್ಜುಗುಜ್ಜು ಆಗಿದ್ದವು. ಮತ್ತು ಏರಿಯಾದ ಹಲವಾರು ರಸ್ತೆಗಳಲ್ಲಿ ನೀರು ತುಂಬಿ ಏರಿಯಾದ ರಸ್ತೆಗಳು ಜಲಾವೃತಗೊಂಡಿತು.
ಏರಿಯಾ ನಂಬರ್ 4 ಜೆಪಿನಗರ ಸಾರಕ್ಕಿ
ಜೆಪಿ ನಗರದ ಸಾರಕ್ಕಿ ಮುಖ್ಯ ರಸ್ತೆಗಳು ಜಲಾವೃತಗೊಂಡಿತು. ಮತ್ತು ಜೆಪಿನಗರದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು.
ಒಟ್ನಲ್ಲಿ ನೆನ್ನೆ ವರುಣ ಮಾಡಿದಂತಹ ಅವಾಂತರಕ್ಕೆ ನಗರದ ಜನರು ತತ್ತರಿಸಿ ಹೋಗಿದ್ದರು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
02/05/2022 04:12 pm