ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹುಲಿ ಸಂರಕ್ಷಿತ ಬಂಡೀಪುರ ಅರಣ್ಯದಲ್ಲಿ ಅವಳಿ ಆನೆ ಮರಿ ಜನನ !

ಬೆಂಗಳೂರು: ರಾಜ್ಯದ ಚಾಮರಾಜನಗರ ಜಿಲ್ಲೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದೆ.ಇದು ತೀರ ಅಪರೂಪ ವಿಷಯವಾಗಿದೆ. ಅರಣ್ಯ ಇಲಾಖೆ ಮತ್ತು ಪ್ರವಾಸಿಗರಿಗೆ ಆನೆ ಹಾಗೂ ಮರಿಗಳ ದರ್ಶನ ಆಗಿದ್ದು ಫುಲ್ ಖುಷಿಯಾಗಿದ್ದಾರೆ.

ಬಂಡೆಗಳ ನಡುವೆ ಸಂಗ್ರಹವಾದ ಮಳೆ ನೀರಲ್ಲಿ ಈಜಾಡುತ್ತ ನಿರತವಾಗಿದ್ದ ಮರಿಗಳನ್ನು ತಾಯಿ ಆನೆ ಹಾರೈಸುತ್ತಿದೆ. ಈ ಚಿತ್ರ ಹಾಗೂ ವೀಡಿಯೋ ಇದೀಗ ಸಖತ್ ವೈರಲ್ ಆಗ್ತಿದೆ. ಬಂಡೀಪುರದಲ್ಲಿ ಸೋಲಿಗರು 40 ವರ್ಷದಿಂದ ಇಂತಹ ಅವಳಿ ಮರಿಗಳ ದರ್ಶನ ಪಡೆದಿಲ್ಲ ಎನ್ನುತ್ತಿದ್ದಾರೆ. ಬಹುಶಃ ಇದು ಬಂಡೀಪುರದ ಇತಿಹಾಸದಲ್ಲಿ ಪ್ರಥಮ ಎಂದು ಅರಣ್ಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ತೀರ ಅಪರೂಪ ಎನಿಸಿದರೂ ರಾಜ್ಯಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಸತ್ಯಮಂಗಲ ಮತ್ತು ಮಧುಮಲೈ ಅರಣ್ಯದಲ್ಲಿ ತಲಾ ಒಂದು ಆನೆ ಅವಳಿ ಮರಿಗಳಿಗೆ ಜನ್ಮ ನೀಡಿದ್ದವು . 2016 ರಲ್ಲಿ ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಟಿ.ಎಂ.ಪಾಳ್ಯ ವಲಯದ ತೆಂಗುಮರಡು ಎಂಬಲ್ಲಿ ಕಾಡಾನೆ ಅವಳಿಗೆ ಜನ್ಮ ನೀಡಿತ್ತು. ಬಂಡೀಪುರಕ್ಕೆ ಹೊಂದಿಕೊಂಡ ಮಧುಮಲೈ ಶಿಬಿರದಲ್ಲೂ ಹಿಂದೆ ದೇವಕಿ ಎಂಬ ಸಾಕಾನೆ ಅವಳಿ ಮರಿಗಳಿಗೆ ಜನ್ಮ ನೀಡಿತ್ತು. ಆ ಮರಿಗಳಿಗೆ ವಿಜಯ್ ಹಾಗೂ ಸುಜಯ್ ಎಂಬ ಹೆಸರಿಡಲಾಗಿತ್ತು. ಈಗ ಆನೆ ಅವಳಿ ಮರಿಗಳಿಗೆ ಜನ್ಮ ನೀಡಿದ್ದು, ಜನರ ಕಣ್ಮನ ಸೆಳೆಯುತ್ತಿದೆ.

Edited By : Shivu K
PublicNext

PublicNext

21/04/2022 11:46 am

Cinque Terre

36.24 K

Cinque Terre

1

ಸಂಬಂಧಿತ ಸುದ್ದಿ