ಬೆಂಗಳೂರು: ಬೆಂಗಳೂರಿನಲ್ಲಿ ದಕ್ಷಿಣ ಭಾಗದಲ್ಲಿ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಕೆಂಗೇರಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಯ ಟಾರ್ ಕಿತ್ತು ಗುಂಡಿ ಆಗುತ್ತವೆ. ಸತತ 2 ಗಂಟೆಯಿಂದಲೂ ಗುಡುಗು ಮಿಂಚು ಸಮೇತವಾಗಿ ಮಳೆ ಬೀಳುತ್ತಿದ್ದು ರಸ್ತೆಗಳೆಲ್ಲ, ಕೆರೆಯಂತೆ ಮಾರ್ಪಾಡಾಗಿವೆ.
ರಸ್ತೆಯಲ್ಲಿರುವ ಚೇಂಬರ್ ಗಳೆಲ್ಲವೂ ಓಪನ್ ಆಗಿ, ವಾಹನ ಸವಾರರು, ಸಾರ್ವಜನಿಕರು ಪರದಾಡುವಂತ್ತಾಗಿದೆ. ಬಿಟ್ಟು,ಬಿಟ್ಟು ಮಳೆ ಬರುತ್ತಿದ್ದು, ಈ ಹಿನ್ನೆಲೆ ಕೆಂಗೇರಿ, ಕೋಡಿಪಾಳ್ಯ, ಹೆಮ್ಮಿಗೆಪುರ, ಸುತ್ತ-ಮುತ್ತ ಹಳ್ಳಿಗಳಲ್ಲಿ ವಿದ್ಯುತ್ ಕಡಿತವಾಗಿದ್ದು ಸತತವಾಗಿ 1 ಗಂಟೆಯಿಂದಲೂ ವಿದ್ಯುತ್ ಕೂಡ ಇಲ್ಲ. ಮಳೆ ಖುಷಿ ಮತ್ತು ಬೇಸರ ಎರಡನ್ನೂ ತಂದಿದೆ ಅಂತಲೇ ಹೇಳಬಹುದು.
PublicNext
13/04/2022 06:55 pm