ಯಲಹಂಕ: ಕಳೆದ ಶನಿವಾರ ರಾತ್ರಿ ವ್ಹೀಲ್ & ಆಕ್ಸೆಲ್ ಫ್ಯಾಕ್ಟರೀಲಿ ಕಾಣಿಸಿಕೊಂಡ ಚಿರತೆ 3 ದಿನಗಳಾದರೂ ಪತ್ತೆಯಾಗಿಲ್ಲ. ನೂರಾರು ಎಕರೆಯ ಪ್ಯಾಕ್ಟರೀ ಆವರಣದಲ್ಲಿ ಅವಿತುಕೊಂಡಿದೆಯಾ? ಅಥವಾ ಮತ್ತೆ ತನ್ನ ಮೂಲಸ್ಥಾನಕ್ಕೆ ಹೊರಟು ಹೋಗಿದೆಯಾ ? ಎಂಬ ಆತಂಕದಲ್ಲಿ ಸಾವಿರಾರು ಕಾರ್ಮಿಕರು ಕಾಲ ಕಳೆಯುವಂತಾಗಿದೆ.
ಹೆಸರಘಟ್ಟದ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ 3500 ಎಕರೆ ಪ್ರದೇಶದ ಕುರುಚಲು ಕಾಡು ಪ್ರದೇಶದಿಂದ ಅಥವಾ ಜಾರಕಬಂಡೆ ಕಾವಲ್ ಅರಣ್ಯ ಪ್ರದೇಶದಿಂದಲೂ ಚಿರತೆ ಆಹಾರವನ್ನರಸಿ ಬಂದಿರಬಹುದು ಎಂದು ಶಂಕಿಸಲಾಗಿದೆ..
ಯಲಹಂಕ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮತ್ತವರ ತಂಡ ಹಾಗು ರೈಲ್ವೆ ಪ್ರೊಟೆಕ್ಷನ್ ಪೋರ್ಸ್ ನ ಹತ್ತಕ್ಕು ಹೆಚ್ಚು ಸಿಬ್ಬಂದಿ ರೈಲ್ವೆ ಪ್ಯಾಕ್ಟರಿ ಆವರಣದಲ್ಲಿ ಮೂರು ಸ್ಥಳಗಳಲ್ಲಿ ಬೋನ್ ಗಳನ್ನಿಟ್ಟು ಚಿರತೆಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅದರೂ ಮೂರು ದಿನಗಳಿಂದ ಚಿರತೆಯ ಸದ್ದೇ ಇಲ್ಲ, ಇನ್ನೊಂದೆಡೆ ರೈಲ್ವೆ ಪ್ಯಾಕ್ಟರಿ ಸಿಬ್ಬಂದಿ & ನಾಗರೀಕರು ಚಿರತೆ ಎಲ್ಲಿ ಪ್ರತ್ಯಕ್ಷವಾಗಿ ತೊಂದರೆ ಆಗ್ತದೋ ಎಂಬ ಭಯದಲ್ಲಿದ್ದಾರೆ.
ಬೋನುಗಳನ್ನಿಟ್ಟಿದ್ದರು ಚಿರತೆ ಇನ್ನೂ ಬೋನಿಗೆ ಬಿದ್ದಿಲ್ಲ ಅಂತಾರೆ ಯಲಹಂಕ ಅರಣ್ಯಾಧಿಕಾರಿ ಮಂಜುನಾಥ್. ಇನ್ನು ಭಾನುವಾರ ರಾತ್ರಿ ಚಿರತೆ ಮತ್ತೆ ಕಾಣಿಸಿಕೊಂಡಿದೆ ಎಂಬ ವೀಡಿಯೋ ಈಗ ಮತ್ತಷ್ಟು ಆತಂಕ ಹೆಚ್ಚಿಸಿದೆ. ಇದರಿಂದ ರೈಲ್ವೆ ಗಾಲಿ & ಅಚ್ಚು ಕಾರ್ಖಾನೆಗೆ ಹೊಂದಿಕೊಂಡ ಜನರಲ್ಲಿ ಚಿರತೆ ಭಯ ಮತ್ತಷ್ಟು ಜೋರಾಗಿದೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ.
PublicNext
29/03/2022 10:41 pm