ವರದಿ: ಹರೀಶ್ ಗೌತಮನಂದ
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರ ಮನವರಳಿಸಲು ಆಡಳಿತ ಮಂಡಳಿ ಒಂದು ಹೆಜ್ಜೆ ಮುಂದಿಟ್ಟಿದೆ.
ವಿಶ್ವ ಜೀಬ್ರಾ ದಿನಾಚರಣೆ ಅಂಗವಾಗಿ ಈ ಚಿತ್ತಾರದ ಪ್ರಾಣಿಗೆ ʼರಾಜಾತಿಥ್ಯʼವೇ ಲಭಿಸುತ್ತಿದೆ.
ಜೀಬ್ರಾ ತನ್ನ ಆಹಾರವನ್ನು ಹೇಗೆ ಹುಡುಕಾಡುತ್ತೆ, ಜೀವನ ಶೈಲಿ ಹೇಗಿರುತ್ತೆ ಅನ್ನೋದರ ಬಗ್ಗೆ ಚಿಣ್ಣರ ಸಹಿತ ಪ್ರವಾಸಿಗರಿಗೆ ಡಾ. ಉಮಾಶಂಕರ್ ಮಾಹಿತಿ ನೀಡಿದರು. ಈ ಸಂದರ್ಭ ಜೀಬ್ರಾ ಚಿತ್ರ ರಚನೆ, ರಸಪ್ರಶ್ನೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಬಿದಿರು ಬೊಂಬಿನೊಳಗೆ ಹಣ್ಣು- ತರಕಾರಿಯಿಟ್ಟು ಜೀಬ್ರಾಗಳಿಗೆ ಉಣಿಸಲಾಯಿತು.
ಜೀಬ್ರಾಗಳು ತಮ್ಮ ಕಾಲಿನಲ್ಲಿ ರೋಲ್ ಮಾಡುವುದರ ಮೂಲಕ ತಮ್ಮ ಆಹಾರ ತಿಂದು ಖುಷಿ ಪಡುತ್ತಿದ್ದವು. ಇದನ್ನು ಕಂಡು ಪ್ರವಾಸಿಗರೂ ಸಂತಸ ವ್ಯಕ್ತಪಡಿಸುತ್ತಿದ್ದರು. ಬನ್ನೇರುಘಟ್ಟ ಉದ್ಯಾನವನದಲ್ಲಿ 2 ಗಂಡು(ಭರತ್, ಹರಿಚಂದ್ರ) ಹಾಗೂ 2 ಹೆಣ್ಣು( ಕಾವೇರಿ, ಕಬಿಲ) ಜೀಬ್ರಾಗಳಿವೆ. ಈ ಜೀವಿಗಳನ್ನು ಇಲ್ಲಿ ಭಾರಿ ಎಚ್ಚರಿಕೆಯಿಂದ ನೋಡಿಕೊಳ್ಳಲಾಗುತ್ತಿದೆ ಎಂದು ಉದ್ಯಾನವನದ ವೈದ್ಯರಾದ ಡಾ. ಉಮಾಶಂಕರ್ ತಿಳಿಸಿದ್ದಾರೆ.
PublicNext
01/02/2022 09:50 pm