ಆನೇಕಲ್: ಕಾಡಾನೆ ಮರಿಯೊಂದರ ರಕ್ಷಣೆಗಾಗಿ ಇದೀಗ ಕರ್ನಾಟಕ ಗಡಿಭಾಗದ ಜವಳಗೆರೆ ಬಳಿಯ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಕಾರಣವೇನೆಂದರೆ, ಈ ಅರಣ್ಯಪ್ರದೇಶದಲ್ಲಿ ಮರವೊಂದಕ್ಕೆ 3 ತಿಂಗಳ ಕಾಡಾನೆ ಮರಿ ಸಿಲುಕಿಕೊಂಡು ಸೊಂಡಿಲು ತುಂಡಾಗಿತ್ತು. ಹಾಗಾಗಿ ಆನೆ ಮರಿಗೆ ಚಿಕಿತ್ಸೆ ನೀಡಲು ಅಧಿಕಾರಿಗಳು ಡ್ರೋನ್ ಕ್ಯಾಮೆರಾ ಮೂಲಕ ಶೋಧದಲ್ಲಿದ್ದಾರೆ.
ಕೆಲ ದಿನಗಳ ಹಿಂದೆ ಜವಳಗೆರೆ ಕಾನನ ಪ್ರದೇಶ ಹೊಂದಿಕೊಂಡಿರುವ ಗ್ರಾಮದಲ್ಲಿ ನೂರಕ್ಕೂ ಅಧಿಕ ಕಾಡಾನೆ ರಸ್ತೆ ದಾಟುವುದನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಇನ್ನು, ಕರ್ನಾಟಕ-ತಮಿಳುನಾಡು ಗಡಿಭಾಗಗಳಾದ ಹೊರಮಾವು ಅಂಚೆಟ್ಟಿ ಡೆಂಕಣಿ ಕೋಟೆ ಶಾನಮಾವು ಸ್ಥಳಗಳಲ್ಲಿ ಕಾಡಾನೆ ಹಿಂಡನ್ನು ಕಂಡು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ನೆಮ್ಮದಿ ದೂರವಾಗಿದೆ. ಅರಣ್ಯಾಧಿಕಾರಿಗಳು ಎಷ್ಟೇ ಕ್ರಮ ಕೈಗೊಂಡರೂ ಮತ್ತೆ ಮತ್ತೆ ಕಾಡಿನಿಂದ ಗ್ರಾಮದ ಕಡೆಗೇ ಗಜ ಪಡೆ ಬರುತ್ತಿವೆ.
PublicNext
20/01/2022 10:23 pm