ಬನ್ನೇರುಘಟ್ಟ: ಅಪರೂಪದ ಚಿನ್ನದ ರಂಗಿನ ಬಲೆ ನೇಯ್ಯುವ ಜೇಡವೊಂದು ಸಾವಿರಕ್ಕೂ ಹೆಚ್ಚು ಮರಿ ಮಾಡುವ ಮೂಲಕ ಬನ್ನೇರುಘಟ್ಟದ ಕೀಟ ಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.
ನೆಪಿಲ ಪಿಲಿಪಸ್ ಎನ್ನುವ ವೈಜ್ಙಾನಿಕ ಹೆಸರಿನಿಂದ ಕರೆಯಲ್ಪಡುವ ಈ ಜೇಡ ಅಪರೂಪವಾಗಿ ದಟ್ಟ ಕಾನನಗಳಲ್ಲಿ ಕಂಡು ಬರುತ್ತದೆ. ಸಾಮಾನ್ಯವಾಗಿ ಮಣ್ಣಿನಲ್ಲಿ 300 ರಿಂದ 1000 ಕ್ಕೂ ಹೆಚ್ಚು ಮೊಟ್ಟೆಗಳನ್ನು ಮಣ್ಣಿನಲ್ಲಿ ಮುಚ್ಚಿ ಇತರೆ ಬೇಟೆಗಾರ ಇರುವೆಗಳಿಂದ ರಕ್ಷಿಸಿ ಕಾವಲು ಕಾಯುತ್ತದೆ.
ಇದೀಗ ಅಪರೂಪವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಚಿಟ್ಟೆ ವನದಲ್ಲಿ ಈ ಜೇಡ ಆಕರ್ಷಕವಾದ ಮರಿಗಳನ್ನ ಮಾಡಿ ತನ್ನತ್ತ ಕೀಟ ಪ್ರಿಯರನ್ನ ಸೆಳೆಯುತ್ತಿದೆ.
ಈ ಜೇಡ ಇತರೆ ಪ್ರಾಣಿಗಳ ಧ್ವನಿಯನ್ನ ಅನುಕರಿಸಿ ಭಯ ಹುಟ್ಟಿಸಿ ತನ್ನ ಮರಿ ಕಾಪಾಡಿಕೊಳ್ಳುವ ಜಾಣ್ಮೆಯನ್ನೂ ಹೊಂದಿರೋದು ವಿಶೇಷ.
ಇನ್ನು ಈ ವಿಶೇಷ ಜೇಡದ ಬಗ್ಗೆ ತಿಳಿಯಲು ಆಸಕ್ತಿಯಿರುವವರು ಬನ್ನೇರುಘಟ್ಟಕ್ಕೆ ಧಾವಿಸಿದರೆ, ಸಾಕಷ್ಟು ವಿವರಗಳನ್ನು ನೀಡುವಲ್ಲಿ ಸಿಬ್ಬಂದಿ ರೆಡಿ ಇದ್ದಾರೆ.
PublicNext
12/01/2022 06:54 pm