ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಣಮಳೆ ಅವಾಂತರ; ಜನ ತತ್ತರ, ಮನೆ ಜಲಮಯ!

ಬೆಂಗಳೂರು: ಬೆಂಗಳೂರು ನಗರ ಮತ್ತು ಹೊರವಲಯ ನೆಲಮಂಗಲ ತಾಲೂಕು, ಬೆಂ. ಉತ್ತರ ತಾಲೂಕು, ಹೆಸರಘಟ್ಟ, ಟಿ.ದಾಸರಹಳ್ಳಿ, ನಾಗಸಂದ್ರ ಬಾಗಲುಗುಂಟೆ, ಶೆಟ್ಟಹಳ್ಳಿ, ಚಿಕ್ಕಬಾಣಾವರ ಸಹಿತ ಇನ್ನೂ ಹಲವೆಡೆ ರಾತ್ರಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಬಿರುಮಳೆಗೆ ಟಿ.ದಾಸರಹಳ್ಳಿ, ಬಾಗಲುಗುಂಟೆ-ಶೆಟ್ಟಹಳ್ಳಿ ಮುಖ್ಯರಸ್ತೆ ಮತ್ತು ಬೆಂಗಳೂರು-ತುಮಕೂರು ಹೆದ್ದಾರಿ, 8ನೇ ಮೈಲಿ ಸಂಪೂರ್ಣ ಜಲಾವೃತಗೊಂಡು ವಾಹನ ಸಂಚಾರ ಅಸ್ತವ್ಯಸ್ತವಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಮಾರುತಿನಗರ ಬಡಾವಣೆಯ ತಗ್ಗುಪ್ರದೇಶದ ಹಲವು ಮನೆಗಳಲ್ಲಿ 3-4 ಅಡಿಯಷ್ಟು ನೀರು ನಿಂತು ಬಟ್ಟೆಬರೆ, ದಿನಸಿ, ಎಲೆಕ್ಟ್ರಾನಿಕ್ ವಸ್ತು ಹಾನಿಯಾಗಿದೆ. ಕೆಲ ನಿವಾಸಿಗಳು ಮನೆಗೆ ನುಗ್ಗಿದ ನೀರನ್ನು ಹೊರಹಾಕಲು ಹರಸಾಹಸ ಪಟ್ಟರೂ ಸಾಧ್ಯವಾಗದೆ, ರಾತ್ರಿ ತಂಗಲು ನೆರೆಮನೆಯವರ ಆಶ್ರಯ ಪಡೆದರು. ಇನ್ನು ಕೆಲವರು ವೃದ್ಧ ಪೋಷಕರು, ಮಕ್ಕಳನ್ನು ಮಂಚ, ಟೇಬಲ್ ಮೇಲೆ ಕೂರಿಸಿ ರಾತ್ರಿ ಇಡೀ ಜಾಗರಣೆ ಮಾಡಿದರು!

ಚಿಕ್ಕಬಾಣಾವರ ಪುರಸಭೆ ಆಯುಕ್ತ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಡಾವಣೆಯ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರನ್ನು ಸಕ್ಕರ್ ಮೆಷಿನ್ ಮೂಲಕ ಹೊರಹಾಕಿಸಿ, ಚರಂಡಿ- ಕಾಲುವೆಗಳಲ್ಲಿ ಸಿಲುಕಿದ್ದ ಕಸಕಡ್ಡಿ, ಮಣ್ಣನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪೌರಾಯುಕ್ತರು, ಈ ಭಾಗದ ಸುತ್ತಮುತ್ತ ರಾಜಕಾಲುವೆ ಒತ್ತುವರಿ ಆಗಿದೆ ಮತ್ತು ಅಕ್ರಮ ಬಡಾವಣೆ ನಿರ್ಮಾಣದ ಜೊತೆಗೆ ಅವೈಜ್ಞಾನಿಕ ಕಾಮಗಾರಿ ಈ ಅವಾಂತರಕ್ಕೆ ಕಾರಣವಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ ಎಂದರು.

Edited By : Nagesh Gaonkar
Kshetra Samachara

Kshetra Samachara

22/11/2021 10:15 pm

Cinque Terre

806

Cinque Terre

0

ಸಂಬಂಧಿತ ಸುದ್ದಿ