ಬೆಂಗಳೂರು: ಅಕಾಲಿಕ ಮಳೆಯಿಂದ ಬೆಳೆ ನಾಶ ಮನೆಗಳ ಕುಸಿತ ಒಂದು ಕಡೆಯಾದ್ರೆ. ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬಟ್ಟೆ ಒಣಗಿಸುವುದು ಒಂದು ಸರ್ಕಸ್ ಆಗಿದೆ.
ತೊಳೆದು ಹಾಕಿದ ಬಟ್ಟೆ ವಾರವಾದ್ರು ಒಣಗದಿರುವುದು ಸಾಮೂಹಿಕ ಸಮಸ್ಯೆಯಾಗಿದೆ. ಸದ್ಯ ಟ್ವಿಟರ್ ನಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಅಪಾರ್ಟ್ಮೆಂಟ್ ಕಾಣದಂತೆ ಜನ ಬಟ್ಟೆ ಒಣ ಹಾಕಿದ್ದಾರೆ. ಕೊಂಚ ವರುಣ ಬ್ರೇಕ್ ತೆಗೆದುಕೊಂಡ ಕಾರಣ ಜನ ಬಟ್ಟೆ ಒಣಗಿಸಲು ಮುಗಿಬಿದ್ದಿದ್ದಾರೆ.
ಇದೇ ವಿಡಿಯೋಗೆ ಬೆಂಗಳೂರಿನಲ್ಲಿ ಡ್ರೈ ಡೇ ಎಂದು ಕ್ಯಾಪ್ಷನ್ ಬರೆಯಲಾಗಿದೆ.
Kshetra Samachara
22/11/2021 05:09 pm