ಬೆಂಗಳೂರು: ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಇಂದು ಸ್ವಲ್ಪವಷ್ಟೇ ಮಳೆಯಬ್ಬರ ಕಮ್ಮಿ ಆಗಿದೆ.
ಹೌದು...ಇಂದು ನಗರದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಳೆ ಜೋರು ಗಾಳಿ- ಬಿರುಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ನಗರದಲ್ಲಿ ಇಂದು ಬೆಳಗ್ಗೆ ಗರಿಷ್ಠ ಉಷ್ಣಾಂಶ 21.6 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 19.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, 2 ಸೆ.ಮೀ. ಮಳೆಯಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 9 ಸೆ.ಮೀ., ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 9 ಸೆ.ಮೀ. ಬೆಂಗಳೂರು ಗ್ರಾಮಾಂತರ 10 ಸೆ.ಮೀ ಮಳೆಯಾಗಿದೆ.
ತಮಿಳುನಾಡು ಪ್ರದೇಶದಲ್ಲಿ ವಾಯುಭಾರ ಕುಸಿತ ಮತ್ತಷ್ಟು ದುರ್ಬಲಗೊಂಡು, ಮೇಲ್ಮೈ ಸುಳಿಗಾಳಿ ರೂಪದಲ್ಲಿ ಇರುವುದರಿಂದ ಇಂದು ಮತ್ತು ನಾಳೆ ಗರಿಷ್ಠ ಉಷ್ಣಾಂಶದಲ್ಲಿ ಸ್ವಲ್ಪ ಏರಿಳಿತವಾಗಲಿದೆ.
ಆದರೆ, ಬೆಂಗಳೂರಿನಲ್ಲಿ ಎರಡೂ ದಿನವೂ ಮೋಡ ಕವಿದ ವಾತಾವರಣ ಇರಲಿದೆ. ಒಂದೆರಡು ಬಾರಿ ಮಾತ್ರ ಮಳೆಯಾಗಲಿದ್ದು, ನಾಳೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.
Kshetra Samachara
19/11/2021 03:27 pm