ಬೆಂಗಳೂರು: ಸತ್ಯಾಗ್ರಹ ಕೇಳಿದ್ದೇವೆ. ಇದೇನಿದು ಸಸ್ಯಾಗ್ರಹ. ಹೌದು. ಇದು ಸಸ್ಯಾಗ್ರಹವೇ. ಸಂಡೆ ಬಂದ್ರೆ ಐಟಿ-ಬಿಟಿ ಹುಡ್ಗರು-ಹುಡ್ಗಿಯರು ಸಾಮಾಜಿಕ ಕಳಕಳಿಯ ಕೆಲಸದಲ್ಲಿ ತೊಡಗಿಕೊಳ್ತಾರೆ. ಅದರಂತೆ ಬನ್ನೇರುಘಟದ ಸಮೀಪ ಸಸ್ಯಾಗ್ರಹ ಈಗ
ಶುರು ಆಗಿದೆ. 303 ಸಸಿಗಳನ್ನ ನೆಡೋದೇ ಈ ಸಸ್ಯಾಗ್ರಹದ ಉದ್ದೇಶ.
ಸಸ್ಯಾಗ್ರಹದ ಮೂಲಕ ಬನ್ನೇರುಘಟ್ಟದ ಆಸು-ಪಾಸು ಸಸಿ ನೆಡುವ ಕೆಲಸ ಶುರು ಆಗಿದೆ. ತೇಜಸ್ವಿನಿ ಅನಂತಕುಮಾರ್ ತಮ್ಮ ಸಂಸ್ಥೆ ಮೂಲಕ ಶುರು ಮಾಡಿರೋ ಈ ಸಸ್ಯಾಗ್ರಹವನ್ನ,ಸಂಡೆ ಸ್ಪೆಷಲ್ ಅನ್ನೊ ಹಾಗೆ ಯುವಕರು-ಯುವತಿಯರು ಅಷ್ಟೇ ಪ್ರೀತಿಯಿಂದಲೇ ಮುಂದುವರೆಸಿದ್ದಾರೆ.ಯುವಕ-ಯುವತಿಯರ ಈ ಸಸ್ಯಾಗ್ರಹದ ವೀಡಿಯೋವನ್ನ ಸ್ವತಃ ತೇಜಸ್ವಿನಿ ಅವ್ರು ತಮ್ಮ ಅಧಿಕೃತಿ ಟ್ವಿಟರ್ ಪೇಜ್ ಅಲ್ಲೂ ಶೇರ್ ಮಾಡಿದ್ದಾರೆ.
Kshetra Samachara
17/10/2021 03:50 pm