ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ಮಳೆ ತಂಪೆರೆದಿದೆ. ರಣ ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ಬುಧವಾರ ಸಂಜೆ ಸುರಿದ ಮಳೆ ತಂಪಿನ ಸಿಂಚನ ಉಂಟುಮಾಡಿದೆ.
ಕಳೆದ ಒಂದು ವಾರದಿಂದ ಬಿರುಬೇಸಗೆಯ ಪರಿಣಾಮ ದಟ್ಟ ಬಯಲುಸೀಮೆಯ ವಾತಾವರಣದಂತಾಗಿ ಹೋಗಿತ್ತು ಬೆಂಗಳೂರು. ದಿನದ ತಾಪಮಾನ 38 ಡಿಗ್ರಿಯಿಂದ 40 ರ ಗಡಿ ದಾಟಿ ಹೋಗಿತ್ತು. ಬುಧವಾರ ಕೂಡಾ ನೆತ್ತಿ ಸುಡುವ ಬಿಸಿಲು. ಮಧ್ಯಾಹ್ನ ಸಮಯದಲ್ಲಂತೂ ತಾಪಮಾನ ವಿಪರೀತವಾಗಿತ್ತು. 4 ಗಂಟೆ ಅಷ್ಟೊತ್ತಿಗೆ ಇದ್ದಕ್ಕಿಂದ್ದಂತೆಯೇ ಮೋಡ ಕವಿದು ಮಳೆ ಸುರಿದು ವಾತಾವರಣ ತಂಪಾಗಿ ತಾಪಮಾನ ಸದ್ಯಕ್ಕೆ 28 ಡ್ರಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದೆ.
PublicNext
13/04/2022 05:59 pm