ತಾಲೂಕಿನ ಕೋಳೂರು ಸಮೀಪದ ತೋಟದ ಮನೆಯಲ್ಲಿ ಕಟ್ಟಲಾಗಿದ್ದ ಸಾಕು ನಾಯಿಯ ಮೇಲೆ ದಾಳಿ ಮಾಡಿದ ಚಿರತೆ ನಾಯಿಯನ್ನು ಕೊಂದು ತಿಂದಿತ್ತು, ಜನರ ನಿದ್ದೆಗೆಡಿಸಿದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದ್ದು ಜನರ ಆತಂಕ ದೂರ ಮಾಡಿದೆ.
ಮೇ 29ರ ರಾತ್ರಿ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರಿನ ಹರೀಶ್ ಎನ್ನುವವರ ತೋಟದ ಮನೆಗೆ ನುಗ್ಗಿದ ಚಿರತೆ ಸಾಕು ನಾಯಿಯನ್ನು ಕೊಂದು ಹಾಕಿತ್ತು. ಕೋಳೂರು ಸುತ್ತಮುತ್ತಲಿನ ಶ್ರೀನಿವಾಸಪುರ, ಮರಳೇನಹಳ್ಳಿ, ಕಮಲೂರು, ಶಿರವಾರ, ಅಂತರಹಳ್ಳಿ ಗ್ರಾಮಗಳಲ್ಲೂ ಚಿರತೆ ಹಲವು ದಿನಗಳಿಂದ ಕಾಣಿಸಿಕೊಳ್ತಾ ಇತ್ತು. ಇದರಿಂದ ಸಹಜವಾಗಿಯೇ ಗ್ರಾಮಸ್ಥರು ಸಹ ಆತಂಕದಲ್ಲಿಯೇ ಇದ್ದರು. ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಕೋಳೂರು ಪ್ಲಾಂಟೇಷನ್ ಬಳಿ ಬೋನ್ ಇಟ್ಟಿದ್ದರು. ನಿನ್ನೆ ರಾತ್ರಿ ಜನರ ನಿದ್ದೆಗೆಡಿಸಿದ ಚಿರತೆ ಬೋನಿಗೆ ಬಿದ್ದಿದೆ.
Kshetra Samachara
02/06/2022 01:38 pm