ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಶ್ವವಿಖ್ಯಾತ ದೊಡ್ಡ‌ ಆಲದಮರ ಪ್ರವಾಸಿಗರ ನೆಚ್ಚಿನ ತಾಣ; ಪಕ್ಷಿಗಳ ಆಶ್ರಯ ತಾಣ

ಯಶವಂತಪುರ ವಿಧಾನಸಭಾ ಕ್ಷೇತ್ರದ ಕೇತೋಹಳ್ಳಿಯ 3 ಎಕರೆಯಲ್ಲಿ ಈ ಬೃಹತ್ ಆಲದ ಮರಗಳಿವೆ. ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ ಹೊಂದಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಆಲದ ಮರಗಳನ್ನ ವಿದೇಶಗಳಿಂದ ಪ್ರವಾಸಿಗರು ವೀಕ್ಷಿಸಲು ಬರ್ತಾರೆ.

ಈ ಆಲದಮರಗಳ ಆಕರ್ಷಣೆ ಎಂದರೆ ಜೋಲಾಡುತ್ತಿರುವ ಈ ಬೇರುಗಳು, 2000 ನೇ ಇಸವಿಯಲ್ಲಿ ಮರಗಳು ಖಾಯಿಲೆಗಳಿಗೆ ತುತ್ತಾಗಿ ನಶಿಸಿ ಹೋಗುತ್ತಿದ್ವು. ಆಗ ಎಚ್ಚೆತ್ತ ತೋಟಗಾರಿಕಾ ಇಲಾಖೆ ಮತ್ತೆ ಮರಗಳನ್ನ ಉಳಿಸಿಕೊಂಡಿದ್ದಾರೆ. ಇದು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಹಲವಾರು ಪಕ್ಷಿಗಳ ಆಶ್ರಯತಾಣವೂ ಆಗಿದೆ.

ವರ್ಷಕ್ಕೊಮ್ಮೆ ವಲಸೆ ಬಂದ ಪಕ್ಷಿಗಳು ಇಲ್ಲಿ ಆಶ್ರಯ ಪಡೆಯುತ್ತವೆ‌‌‌. ಈ ದೊಡ್ಡ ಆಲದ ಮರದ ಇತಿಹಾಸದ ಬಗ್ಗೆ ನಮ್ ರಿಪೋರ್ಟರ್ ವಾಕ್ ಥ್ರೂ ಮಾಡಿದ್ದಾರೆ ನೋಡೋಣ ಬನ್ನಿ..

Edited By :
PublicNext

PublicNext

28/07/2022 06:13 pm

Cinque Terre

30.5 K

Cinque Terre

0

ಸಂಬಂಧಿತ ಸುದ್ದಿ