ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಗಣಿ ಸಂತೆ ಯಲ್ಲಿ ಒಳಚರಂಡಿ ನೀರಿನಿಂದ ಸಂಪೂರ್ಣ ಜಲಾವೃತ

ಆನೇಕಲ್ : ರಸ್ತೆ ಒಳಚರಂಡಿ ನೀರಿನಿಂದ ಸಂಪೂರ್ಣ ಜಲಾವೃತ ಗೊಂಡಿರುವ ಘಟನೆ ಆನೇಕಲ್ ತಾಲೂಕಿನ ಜಿಗಣಿ ಸಂತೆ ಬೀದಿಯಲ್ಲಿ ನಡೆದಿದೆ ಇನ್ನೂ ಒಳಚರಂಡಿ ನೀರಿನಿಂದಾಗಿ ಸಂತೆ ಬೀದಿಯಲ್ಲಿ ಕೆಟ್ಟ ವಾಸನೆಯಿಂದ ಜನರು ಹೈರಾಣಾಗಿದ್ದಾರೆ . ಇನ್ನೂ ರಸ್ತೆ ಮಧ್ಯದಲ್ಲಿ ಒಳಚಂಡೆ ನೀರು ಒಡೆದ ಹಿನ್ನೆಲೆಯಲ್ಲಿ ಸಂಪೂರ್ಣ ರಸ್ತೆ ಅಲ್ಲ ಜಲಾವೃತಗೊಂಡಿದೆ.

ಇನ್ನು ವ್ಯಾಪಾರಕ್ಕೆ ಬರುವ ಸಾರ್ವಜನಿಕರಿಗೆ ಮತ್ತು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಸಹ ಸಾಕಷ್ಟು ತೊಂದರೆ ಅನುಭವಿಸುವ ಪರಿಸ್ಥಿತಿ ಎದುರಾಗಿದೆ ಇನ್ನು ಈ ಅವ್ಯವಸ್ಥೆಯ ಬಗ್ಗೆ ಪುರಸಭೆ ಗಮನಕ್ಕೂ ತಂದ್ರು ಸಹ ಯಾವುದೇ ಪ್ರಯೋಜನ ಇಲ್ಲ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪುರಸಭೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದರು.

Edited By : PublicNext Desk
Kshetra Samachara

Kshetra Samachara

03/10/2022 05:43 pm

Cinque Terre

1.17 K

Cinque Terre

0

ಸಂಬಂಧಿತ ಸುದ್ದಿ