ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಿನ್ನೆ ವರುಣನ ಆರ್ಭಟ ಜೋರಾಗಿತ್ತು. ಅದರಲ್ಲೂ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ರಸ್ತೆಗಳು ನದಿಯಂತೆ ಮಾರ್ಪಟ್ಟಿತು. ದಕ್ಷಿಣ ಬೆಂಗಳೂರಿನ ಹಲವಾರು ಕಡೆ ಭಾರಿ ಗಾಳಿ ಸಹಿತ ಮಳೆ ಆಗಿದೆ. ಭಾರೀ ಮಳೆಗೆ ವಾಹನ ಸವಾರರು ರಸ್ತೆಯಲ್ಲಿ ಪರದಾಡುವ ಸ್ಥಿತಿ ಸಾಮಾನ್ಯವಾಗಿತ್ತು.
ನದಿಯಂತೆ ಮಳೆ ನೀರು ರಸ್ತೆ ಮೇಲೆ ನಿಂತಿದ್ದರಿಂದಲೇ ವಾಹನ ಸವಾರರು ಪರದಾಟ ನಡೆಸಿ,ನೀರಿನಲ್ಲಿ ವಾಹನ ತಳ್ಳಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್ ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರು ಬೈಕ್ ಗಳು ನೀರಿನಲ್ಲಿ ಮುಳುಗಿ ಹೋಗಿದ್ದವು ಮತ್ತು ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಯಿತು.
ಎಚ್ಎಸ್ಆರ್ ಲೇಔಟ್, ಬೊಮ್ಮನಹಳ್ಳಿ, ಮಡಿವಾಳ, ಜೆಪಿ ನಗರ, ಬಿಟಿಎಂ ಲೇಔಟ್, ಕುಮಾರಸ್ವಾಮಿ ಲೇಔಟ್ ಮತ್ತು ಮುಂತಾದ ಏರಿಯಾಗಳಲ್ಲಿ ವಿಪರೀತ ಮಳೆ ಆಗಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
31/07/2022 10:48 am