ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 20 ಸಾವಿರಕ್ಕೂ ಅಧಿಕ ಗಿಡ ನೆಟ್ಟು ಪೋಷಣೆ!; ಪ್ರಕೃತಿ ಮಾತೆ ಸೇವೆಗೆ ಶ್ರೀರಾಮ್ ಬದುಕು ಅರ್ಪಣೆ

ವರದಿ: ಬಲರಾಮ್ ವಿ.

ಬೆಂಗಳೂರು: ಕೆಲವರಂತೂ ಒಂದೆರಡು ಗಿಡಗಳನ್ನು ನೆಟ್ಟು ಪರಿಸರ ಪ್ರೇಮಿಗಳು ಎಂಬ ಭ್ರಮೆಯಲ್ಲಿರ್ತಾರೆ. ಆದರೆ, ಇಲ್ಲೊಬ್ಬರು ಕಳೆದ 15 ವರ್ಷಗಳಿಂದಲೂ ಪ್ರಕೃತಿ ಮಾತೆಯ ಲಾಲನೆ ಪಾಲನೆ ಮಾಡುತ್ತಾ ಎಲೆಮರೆ ಕಾಯಿಯಂತಿದ್ದಾರೆ. ಅವರೇ ಕೆಆರ್ ಪುರದ ಎಂ. ಶ್ರೀರಾಮ್.

ಬೆಂಗಳೂರು ಪೂರ್ವ ತಾಲ್ಲೂಕಿನ ಕೆಆರ್ ಪುರ ನಿವಾಸಿ ಎಂ .ಶ್ರೀ ರಾಮ್, ಪ್ರಕೃತಿ ಉಳಿವಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಈ ಸರ್ಕಾರಿ ಬ್ಯಾಂಕ್ ಉದ್ಯೋಗಿ, ಈವರೆಗೆ 20,000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಕೆಆರ್ ಪುರ ಭಾಗದಲ್ಲಿ ಸುಮಾರು ಹತ್ತು ಸಾವಿರ ಗಿಡಗಳನ್ನು ನೆಟ್ಟಿರುವ ಶ್ರೀರಾಮ್‌, ಕೆಆರ್ ಪುರದ ಸಾರ್ವಜನಿಕ ಆಸ್ಪತ್ರೆ ಹಚ್ಚ ಹಸಿರಿನಿಂದ ಕೂಡಿರಲು ಇವರೇ ಕಾರಣ. ಅಲ್ಲದೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಚಿಂತಾಮಣಿ ಸೇರಿದಂತೆ ವಿವಿಧ ಭಾಗಗಳಲ್ಲಿ 5 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ ಈ ಪರಿಸರ ಪ್ರೇಮಿ.

ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಕಾರ್ಯಗಳಿಂದ ಪ್ರಭಾವಿತರಾಗಿ ಅರಳಿ ಮರ, ಅತ್ತಿಮರ, ನೇರಳೆ ಮರ, ಹಿಪ್ಪೆಮರ, ಬೆಟ್ಟದ ನೆಲ್ಲಿಕಾಯಿ ಸಹಿತ ಹಲವು ಸಸಿಗಳನ್ನು ನೆಟ್ಟಿದ್ದಾರೆ. ಆಮ್ಲಜನಕ ಅಧಿಕವಾಗಿ ನೀಡುವ ರೋಷಯು, ಕದಂಬ, ಸಂಪಿಗೆ, ದೇವಗಿರಿ, ಕಾಡುಮಲ್ಲಿಗೆ, ಅರ್ಜುನ- ಅಶೋಕ ಮರದಂತಹ ಬಹುತೇಕ ಗಿಡಗಳನ್ನು ನೆಟ್ಟು, ಪೋಷಿಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

05/06/2022 08:39 pm

Cinque Terre

47.42 K

Cinque Terre

0

ಸಂಬಂಧಿತ ಸುದ್ದಿ