ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೋಡಿ ಹರಿದ ದಂಡಿಗಾನಹಳ್ಳಿ ಕೆರೆ!; ಬೆಳೆ ನಾಶ ದೃಶ್ಯಾವಳಿ ಡ್ರೋಣ್‌ ನಲ್ಲಿ ಸೆರೆ

ಬೆಂಗಳೂರು: ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ದಂಡಿಗಾನಹಳ್ಳಿ ಕೆರೆ ಭರ್ತಿಯಾಗಿ ಕೋಡಿ ಹರಿದಿದೆ.

ದಕ್ಷಿಣ ಪಿನಾಕಿನಿ ನದಿ ಪಾತ್ರದ ದಂಡಿಗಾನಹಳ್ಳಿ ಕೆರೆ ತುಂಬಿ ಕೆರೆಯ ಎರಡೂ ಕಡೆ ಕೋಡಿ ಬಿದ್ದ ಪರಿಣಾಮ ಸುತ್ತಮುತ್ತಲಿನ ಪ್ರದೇಶ ಜಲಾವೃತವಾಗಿದೆ. ಮಳೆನೀರು ಅಕ್ಕಪಕ್ಕದ ನೂರಾರು ಎಕರೆ ಜಮೀನುಗಳಿಗೆ ನುಗ್ಗಿ ನದಿಯಂತಾಗಿವೆ!

ಮಳೆ ನೀರಿನಿಂದ ದ್ರಾಕ್ಷಿ, ಜೋಳ, ರಾಗಿ ಸೇರಿದಂತೆ ಹತ್ತಾರು ಬೆಳೆಗಳು ಸಂಪೂರ್ಣ ನಾಶವಾಗಿವೆ. ಈ ಪ್ರದೇಶದಲ್ಲಿ ಹಾನಿಯಾಗಿರೋ ಬೆಳೆಗಳನ್ನು ಡ್ರೋಣ್ ಸೆರೆ ಹಿಡಿದಿದೆ.

ಕೆರೆ ತುಂಬಿದ ಖುಷಿ ಒಂದು ಕಡೆಯಾದರೆ, ಮತ್ತೊಂದು ಕಡೆ ಅಪಾರ ಪ್ರಮಾಣದಲ್ಲಿ ಬೆಳೆ ಕೊಳೆತು ಹೋಗ್ತಿವೆ. ಭಾರಿ ಪ್ರಮಾಣದ ನೀರಿನಿಂದ ಜನ ಕಂಗಾಲಾಗಿದ್ದಾರೆ.

ವಿಜಯಪುರ ಕೆರೆ ಕೋಡಿ ಬೀಳಲು ಒಂದಡಿ ಬಾಕಿ ಇದೆ. ರಾಜಕಾಲುವೆ ಅಕ್ಕಪಕ್ಕದ ಜನರಿಗೆ ವಿಜಯಪುರ ಪುರಸಭೆ ಅಧಿಕಾರಿಗಳು ಜಾಗೃತಿ ಮೂಡಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿದ್ದಾರೆ.

Edited By :
PublicNext

PublicNext

01/09/2022 08:54 pm

Cinque Terre

38.31 K

Cinque Terre

0

ಸಂಬಂಧಿತ ಸುದ್ದಿ