ಆನೇಕಲ್: ಕೋಡಿ ಹರಿಯುತ್ತಿದ್ದ ನೀರಿನಲ್ಲಿ ಅತಿವೇಗವಾಗಿ ಚಲಿಸಿದ ಪರಿಣಾಮ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ಕೆರೆ ಕೋಡಿ ಬಳಿ ಘಟನೆ ನಡೆದಿದೆ ಇನ್ನು ಕೂದಲಲ್ಲೇ ಅಂತರದಲ್ಲಿ ಬೈಕ್ ಸವಾರ ಬಚಾವಾಗಿದ್ದಾರೆ. ಬೈಕ್ ಸವಾರ ಬಿದ್ದ ಬಳಿಕ ಸ್ಥಳೀಯರ ರಕ್ಷಣೆಗೆ ಮುಂದಾಗಿದ್ದಾರೆ.
ಇನ್ನು ಚಂದಾಪುರ ದೊಮ್ಮಸಂದ್ರ ಮುಖ್ಯ ರಸ್ತೆಯ ಇದಾಗಿದ್ದು ಪ್ರಮುಖ ಹಳ್ಳಿಗಳಿಗೆ ರಸ್ತೆ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಇನ್ನೂ ಕೋಡಿ ಹರಿಯುತ್ತಿರುವ ನೀರಲ್ಲಿ ಸಂಚರಿಸಲಾಗದೆ ವಾಹನ ಸವರರು ಪರದಾಟ ಮಾಡುವ ಪರಿಸ್ಥಿತಿ ಎದುರಾಗಿದ್ದು ಜೀವ ಭಯದಲ್ಲಿಯೇ ಸಂಚಾರ ಮಾಡುತ್ತಿದ್ದಾರೆ. ಇನ್ನು ಸ್ವಲ್ಪ ಯಾಮಾರಿದರೂ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇದೆ. ಹೀಗಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ಮುಂಜಾಗ್ರತೆಯಿಂದ ವಾಹನಗಳನ್ನು ಚಲಿಸಲಿ ಅನ್ನೋದೇ ನಮ್ಮ ಆಶಯ.
PublicNext
07/09/2022 03:09 pm